Asianet Suvarna News Asianet Suvarna News

ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ ಪ್ರಿಯಾ ಹಾಸನ್; ಏನಪ್ಪಾ ಗುಡ್‌ನ್ಯೂಸ್?

ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾನೆ | ವೆಡ್ಡಿಂಗ್ ಆ್ಯನಿವರ್ಸರಿ ದಿನವೇ ಡಬಲ್ ಧಮಾಕಾ | ಜರ್ಮನಿ ವಿಶ್ವವಿದ್ಯಾಲಯದಿಂದ  ಗೌರವ ಡಾಕ್ಟರೇಟ್ ಪದವಿ 

Priya Hasan bagged doctorate from Germany  University
Author
Bengaluru, First Published Sep 27, 2018, 4:38 PM IST
  • Facebook
  • Twitter
  • Whatsapp

ಬೆಂಗಳೂರು (ಸೆ. 27): ಬಿಂದಾಸ್ ಹುಡುಗಿ ನಟಿ ಪ್ರಿಯಾ ಹಾಸನ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅವರ ಈ ಖುಷಿಗೆ ಮೂರು ಕಾರಣಗಳಿವೆ.

ಸೆ. 24 ಕ್ಕೆ ಅವರು ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಅದೇ ಸಮಯಕ್ಕೆ ಜರ್ಮನಿ ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿದೆ. ಮತ್ತೊಂದೆಡೆ ಅವರದೇ ನಿರ್ದೇಶನ ಮತ್ತು ನಟನೆಯಲ್ಲಿ ‘ರಣ ಚತುರೆ’ ಹೆಸರಿನ ಹೊಸ ಸಿನಿಮಾ ಶುರುವಾಗುತ್ತಿದೆ.

‘ನನ್ನ ಕನ್ನಡ ಪರ ಕೆಲಸ  ಸಿನಿಮಾ ಸೇವೆಯನ್ನು ಪರಿಗಣಿಸಿ ಜರ್ಮನಿ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ಇದು ನನ್ನ ಜೀವನದ ಮಹತ್ತರ ಘಟನೆ’ ಎನ್ನುತ್ತಾರೆ ಪ್ರಿಯಾ ಹಾಸನ್ 

Follow Us:
Download App:
  • android
  • ios