ಪ್ರೇಮದ ಊರಲಿ ನಟಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಅತೀವ ಪ್ರೀತಿ ತೋರಿಸಿದ್ದಾರೆ. ಆದರೆ ಇದೇ ನಟಿಯನ್ನು ಹಲವು ನಿರ್ದೇಶಕರು ಕಪ್ಪು, ಗ್ಲಾಮರಿಲ್ಲ ಎಂದು ದೂರವಿಟ್ಟಿದ್ದರು. ಈ ಘಟನೆ ಕುರಿತು ನಟಿ ಹೇಳಿದ್ದೇನು?
ಬೆಂಗಳೂರು (ಅ.23) ಪ್ರೇಮದ ಊರಲಿ ಸಿನಿಮಾ ಯಶ್ಸಸಿನ ಅಲೆಯಲ್ಲಿದೆ. ಪ್ರತಿ ಹಳ್ಳಿಯ ಚಿತ್ರಮಂದಿರಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಾ ಈಗಾಗಲೇ 100 ಕೋಟಿ ರೂಪಾಯಿ ದಾಟಿದೆ. ಸಿನಿಮಾ ತಂಡ ಜನರು ನೀಡಿದ ಪ್ರೀತಿಯಿಂದ ಪುಳಕಿತಗೊಂಡಿದೆ. ಬಹುತೇಕ ಹೊಸಬರೇ ಇರುವ ಈ ಸಿನಿಮಾ, ಕನ್ನಡದ ನಟ ನಟಿಯರು, ಹೊಸ ಕಲಾವಿದರಿಗೆ ಹೊಸ ವೇದಿಕೆ ಸೃಷ್ಟಿಸಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಪ್ರೇಮದ ಊರಲಿ ಸಿನಿಮಾದಲ್ಲಿ ಅಜ್ಜಿ ಪಾತ್ರ ಮೆಚ್ಚುಗೆಗೆ ಪಾತ್ರವಾಗಿರುವ ಇಳಾ ವಿಟ್ಲಾ ಕೆಲ ರೋಚಕ ಘಟನೆ ಬಿಚ್ಚಿಟ್ಟಿದ್ದಾರೆ.
ಕಪ್ಪು, ಗ್ಲಾಮರಿಲ್ಲ ಎಂದು ಅವಕಾಶ ಸಿಗಲಿಲ್ಲ
ಪ್ರೇಮದ ಊರಲಿ ಸಿನಿಮಾದಂತೆ ಸಿನಿಮಾಗಳು ಕನ್ನಡದಲ್ಲಿ ಬರಬೇಕು. ಇದರಿಂದ ಹೊಸಬರಿಗೆ, ನಮ್ಮಂತ ಕಲಾವಿದರಿಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ. ಸಿನಿಮಾದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದೇನೆ. ಆರಂಭಿಕ ದಿನಗಳಲ್ಲಿ ಹಲವರು ನೀನು ಕಪ್ಪು, ಗ್ಲಾಮರಿಲ್ಲ ಎಂದು ಅವಕಾಶ ನೀಡದೆ ದೂರ ಮಾಡಿದ್ದರು ಎಂದು ಇಳಾ ವಿಟ್ಲಾ ಹೇಳಿದ್ದಾರೆ. ಹೊರ ರಾಜ್ಯಗಳಿಂದ ನಟಿಯರನ್ನು ಕರೆಯಿಸಿಕೊಳ್ಳುವ ಟ್ರೆಂಡ್ ಕುರಿತು ಮಾತನಾಡಿದ್ದಾರೆ. ಚೆನ್ನಾಗಿರುವ, ಬೆಳ್ಳಗಿರುವ ನಟಿಯರನ್ನು ಹುಡುಕಿ ಕರೆತರುತ್ತಾರೆ. ಇವರ ಮುಂದೆ ನಾವು ಹೋದಾಗ ನೀವು ಕಪ್ಪು, ಚೆನ್ನಾಗಿಲ್ಲ ಎನ್ನುತ್ತಾರೆ. ಹಲವು ಬಾರಿ ನನಗೆ ಹೇಳಿದ್ದಾರೆ ಎಂದು ಇಳಾ ವಿಟ್ಲ ಹೇಳಿದ್ದಾರೆ. ಹೊರಗಿನ ನಟಿಯರನ್ನು ಕರೆಸುವುದು ತಪ್ಪು ಎಂದಲ್ಲ, ಹೊಸ ಸಿನಿಮಾಗಳು ಬಂದಾಗ ಇಲ್ಲಿನ ಸ್ಥಳೀಯ ನಟಿಯರಿಗೆ ಅವಕಾಶ ಸಿಗುತ್ತದೆ. ಉತ್ತಮ ಕತೆಯೊಂದಿಗೆ, ಉತ್ತಮ ಸಿನಿಮಾ ಆಗಿ ತೆರೆ ಮೇಲೆ ಬಂದಾಗ, ಸಿನಿಮಾದ ಎಲ್ಲರಿಗೂ ಹೊಸ ವೇದಿಕೆ ಸೃಷ್ಟಿಯಾಗುತ್ತದೆ. ಇದಕ್ಕೆ ಪ್ರೇಮದ ಊರಲಿ ಒಂದು ಉದಾಹರಣೆಯಾಗಿದೆ ಎಂದು ಇಳಾ ವಿಟ್ಲಾ ಹೇಳಿದ್ದಾರೆ.
ಇಳಾ ವಿಟ್ಲಾ ಕಪ್ಪಾಗಿದ್ದು ಹೇಗೆ, ರೋಚಕ ಘಟನೆ ಬಿಚಿಟ್ಟ ನಟಿ
ಆರಂಭದಲ್ಲಿ ಇಂಡಸ್ಟ್ರಿಗೆ ಬರುವಾಗ ಅವಕಾಶಕ್ಕಾಗಿ ಅಲೆದು ಅಲೆದು ಸುಸ್ತಾಗಿರುತ್ತೇವೆ. ಕೊನೆಗೆ ಸನ್ಸ್ಕ್ರೀನ್ ಲೋಶನ್ ಹಾಕಲು ದುಡ್ಡಿರಲ್ಲ. ಮೇಕ್ಅಪ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇರುತ್ತೆ. ಬಿಸಲಿಲ್ಲೇ ಓಡಾಡಿ ನಾವು ಕಪ್ಪಾಗಿರುತ್ತೇವೆ. ಉತ್ತಮ ಡ್ರೆಸ್, ಟ್ರೆಂಡ್ಗೆ ತಕ್ಕ ಡ್ರೆಸ್ ಯಾವುದು ಇರಲ್ಲ. ಹೀಗಾಗಿ ನಾವು ಕಪ್ಪಾಗಿ ಕಾಣುತ್ತೇವೆ, ಗ್ಲಾಮರ್ಲೆಸ್ ಆಗುತ್ತೇವೆ. ಆದರೆ ಈಗ ನಾವು ಮೇಕ್ಅಪ್ ಮಾಡಿಕೊಳ್ಳುತ್ತೇವೆ, ಛತ್ರಿ ಹಿಡಿಯುತ್ತೇವೆ, ಕಾಳಜಿ ವಹಿಸುತ್ತೇವೆ ಎಂದು ಗ್ಲಾಮರ್ ಲೋಕದ ಆರಂಭಿಕ ದಿನಗಳ ಕುರಿತು ಇಳಾ ವಿಟ್ಲಾ ಹಾಸ್ಯಚಟಾಕಿಯೊಂದಿಗೆ ವಿವರಿಸಿದ್ದಾರೆ.
ಆರಂಭಿಕ ದಿನಗಳಲ್ಲಿ ಇಂಡಸ್ಟ್ರಿಗೆ ಬಂದಾಗ ಯಾವ ನಟಿ ಗ್ಲಾಮರಸ್ ಆಗಿ ಕಾಣುತ್ತಿದ್ದರು. ಎಲ್ಲರೂ ಅಲೆದಾಡುತ್ತಿದ್ದ ಸಮಯ. ಆದರೆ ಈಗ ಬರವು ನಟಿಯರು ನಮಗಿಂತ ತುಂಬಾ ಚೆನ್ನಾಗಿದ್ದಾರೆ, ಅದು ಖುಷಿಯ ವಿಚಾರ ಎಂದು ಇಳಾ ವಿಟ್ಲ ಹೇಳಿದ್ದಾರೆ. ಈಗಿನ ಪರಿಸ್ಥಿತಿ ಹೇಗೆ, ನೋಡೋಕೆ ಚೆನ್ನಾಗಿರಬೇಕು, ಡ್ರೆಸ್ ಚೆನ್ನಾಗಿರಬೇಕು, ನಟನೆ ಬರದಿದ್ದರೂ ಪರವಾಗಿಲ್ಲ ಅನ್ನೋ ಮನೋಭಾವನೆ ಬರುತ್ತೆ.ಕಲಾವಿದರನ್ನು ಗೌರವಿಸುವ ನಿರ್ದೇಶಕರು, ನಿರ್ಮಾಪಕರು ಬರಬೇಕು ಎಂದು ಇಳಾ ವಿಟ್ಲಾ ಹೇಳಿದ್ದಾರೆ.
ಅವಕಾಶಗಳು ಕಡಿಮೆ ಆಗಿದೆ ನಿಜ, ಆದರೆ ಪ್ರೇಮದ ಊರಲಿ ಸಿನಿಮಾ ಗಳು ಹೆಚ್ಚು ಬರಬೇಕು. ಒಳ್ಳೆ ಕತೆ, ಗಟ್ಟಿಯಾಗಿರುವ ನಿರ್ದಶಕರು ಬರಬೇಕು. ಸುಮ್ಮನೆ ನಿರ್ಮಾಪಕರನ್ನು ಸಂಕಷ್ಟಕ್ಕೆ ದೂಡುವು, ಅವರಲ್ಲಿ ಬಣ್ಣ ಬಣ್ಣಧ ಕತೆ ಹೇಳಿ, ದಿಕ್ಕಿ ದೆಸೆ ಇಲ್ಲದ ಸಿನಿಮಾಗಳು ಮಾಡಬಾರದು ಎಂದು ಇಳಾ ವಿಟ್ಲ ಹೇಳಿದ್ದಾರೆ.



