ಬಾಲಿವುಡ್ ಗುಳಿ ಕೆನ್ನೆ ಸುಂದರಿ ಪ್ರೀತಿ ಜಿಂಟಾ ಮೀ ಟೂ ಬಗ್ಗೆ ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. 

ಮುಂಬೈ: ಇತ್ತೀಚೆಗೆ ಲೈಂಗಿಕ ಶೋಷಿತೆಯರು, ಮನದೊಳಗೆ ಬಚ್ಚಿಟ್ಟುಕೊಂಡಿದ್ದ ಶೋಷಣೆಯ ಕೃತ್ಯಗಳನ್ನು ಬಯಲು ಮಾಡುವ ವೇದಿಕೆಯಾಗಿದ್ದ ‘ಮೀಟೂ’ ಆಂದೋಲನದ ಬಗ್ಗೆ ನಟಿ ಪ್ರೀತಿ ಝಿಂಟಾ ಆಡಿದ ಮಾತುಗಳು ವಿವಾದಕ್ಕೀಡಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಬಾಲಿವುಡ್‌ ಹಂಗಾಮಾ’ ಎಂಬ ಮಾಧ್ಯಮಕ್ಕೆ ಪ್ರೀತಿ ಸಂದರ್ಶನ ನೀಡುವಾಗ ಅವರಿಗೆ ‘ನಿಮಗೇನಾದರೂ ಮೀ ಟೂ ಅನುಭವ ಆಗಿದೆಯಾ?’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರೀತಿ, ‘ಬಾಲಿವುಡ್‌ ಸುರಕ್ಷಿತ ಸ್ಥಳ. ಇಲ್ಲಿ ಯಾವುದೇ ಲೈಂಗಿಕ ಶೋಷಣೆ ನಡೆಯಲ್ಲ. ಕೆಲವರು ಪ್ರಚಾರಕ್ಕೆ ಆರೋಪಗಳನ್ನು ಮಾಡುತ್ತಾರೆ’ ಎಂದು ಟೀಕಿಸಿದರು.

ಬಳಿಕ ಮುಂದುವರಿದ ಅವರು, ‘ನಾನಂತೂ ಯಾವತ್ತೂ ಲೈಂಗಿಕ ಶೋಷಣೆಗೆ ಒಳಗಾಗಿಲ್ಲ. ಒಂದು ವೇಳೆ ಶೋಷಣೆಗೆ ಒಳಗಾಗಿದ್ದರೆ ನಿಮ್ಮ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರುತ್ತಿತ್ತು’ ಎಂದು ಲಘು ಶೈಲಿಯಲ್ಲಿ ಹೇಳಿದರು. ಆನಂತರ, ‘ಇಂದಿನ ಸ್ವೀಟಿಯೇ ನಾಳೆಯ ಮೀಟೂ ಆಗಬಹುದು’ ಎಂದು ಚಟಾಕಿ ಹಾರಿಸಿದರು.

ಪ್ರೀತಿ ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ತಮ್ಮ ಸಂದರ್ಶನ ತಿರುಚಿ ಪ್ರಸಾರ ಮಾಡಲಾಗಿದೆ ಎಂದು ಪ್ರೀತಿ ಕಿಡಿಕಾರಿದ್ದಾರೆ.