ಆ್ಯಮಿ ಜಾಕ್ಸನ್‌ ಕೆಲವು ದಿನಗಳ ಹಿಂದಷ್ಟೇ ತನ್ನ ಪತಿ ಜಾಜ್‌ರ್‍ ಪನಯೋಟು ಜೊತೆಗಿನ ಚೆಂದದೊಂದು ಫೋಟೋವನ್ನು ಸೋಷಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಇದಾದ ಮೇಲೆ ಆ್ಯಮಿ ಜಾಕ್ಸನ್‌ ಫುಲ್‌ ರೆಸ್ಟ್‌ ಮೂಡ್‌ಗೆ ಹೋಗಿ ಬಿಡುತ್ತಾರೆ, ಬಹುತೇಕ ಎಲ್ಲರಂತೆಯೇ ತೆರೆಯ ಹಿಂದೆ ಸರಿದು ಬಿಡುತ್ತಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದವು.

ಛಲಗಾತಿ ಆ್ಯಮಿ ಸುಮ್ಮನೆ ಕೂರುವ ಜಾಯಮಾನಕ್ಕೆ ಸೇರಿದವರಲ್ಲ ಎನ್ನುವುದನ್ನು ತೋರಿಸುವುದಕ್ಕಾಗಿಯೇ ಸ್ಪೇನ್‌ಗೆ ಹೋಗಿ ಬಂದಿದ್ದಾರೆ.

ಅದು ಯಾಕೆ ಗೊತ್ತಾ? ಸ್ಪೇನ್‌ನಲ್ಲಿ ನಡೆದ ಪ್ರೊನೋವೈಸ್‌ ಫ್ಯಾಷನ್‌ ಶೋಗೆ. ಗರ್ಭಿಣಿಯಾಗಿ ಫ್ಯಾಷನ್‌ ಶೋನಲ್ಲಿ ಕಾಣಿಸಿಕೊಂಡರೆ ಎಂದು ಬೆರಗಾಗಬೇಡಿ, ರೆಡ್‌ ಕಾರ್ಪೆಟ್‌ನಲ್ಲಿ ಮಿಕ್ಕ ರೂಪದರ್ಶಿಗಳಿಗೆ ಸರಿಸಾಟಿಯಾಗಿ ಹೆಜ್ಜೆ ಹಾಕಿ ತಾನು ಗರ್ಭಿಣಿಯಾಗಿದ್ದರೂ ಫ್ಯಾಷನ್‌ ಶೋನಲ್ಲಿ ಭಾಗಿಯಾಗಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದಾದ ಮೇಲೆ ಈ ಬಗ್ಗೆ ಸೋಷಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿಕೊಂಡು ಬೀಗುತ್ತಿದ್ದಾರೆ.

View post on Instagram