ಮತ್ತೊಮ್ಮೆ ನಿರ್ದೇಶಕ ಪಿ ಸಿ ಶೇಖರ್‌ ಅವರು ಪ್ರಜ್ವಲ್‌ ದೇವರಾಜ್‌ ಮೊರೆ ಹೋಗಿದ್ದಾರೆ. ‘ಅರ್ಜುನ್‌’ ಚಿತ್ರದ ನಂತರ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಾರಿ ಪ್ರಜ್ವಲ್‌ ಅವರನ್ನು ಗ್ಯಾಂಗ್‌ಸ್ಟರ್‌ ಮಾಡುವುದಕ್ಕೆ ಹೊರಟಿದ್ದಾರೆ ಪಿ ಸಿ ಶೇಖರ್‌. ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ವಿಶೇಷ ಅಂದರೆ ಇದು ಕೂಡ ಮಲ್ಟಿಲ್ಯಾಂಗ್ವೇಜ್‌ ಸಿನಿಮಾ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬರಲಿದ್ದು, ನಾಲ್ಕೂ ಭಾಷೆಗೂ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಿದ್ದಾರೆ.

ಪ್ರಮುಖ ಕಲಾವಿದರ ಜಾಗದಲ್ಲಿ ಆಯಾ ಭಾಷೆಗೆ ಗೊತ್ತಿರುವವರನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಹೊರಟಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿರುವುದು ಚಂದನ್‌ ಗೌಡ. ಜುಲೈ 6ರಿಂದ ಚಿತ್ರೀಕರಣ ಶುರುವಾಗಲಿದೆ.

Add Asianetnews Kannada as a Preferred SourcegooglePreferred

ಹಾಗೆ ನೋಡಿದರೆ ಪಿ ಸಿ ಶೇಖರ್‌ ‘ಟೆರರಿಸ್ಟ್‌’ ಚಿತ್ರದ ನಂತರ ಆ ದಿನಗಳು ಚೇತನ್‌ ಜತೆಗೆ ಒಂದು ಸಿನಿಮಾ ಮಾಡುವ ಸುದ್ದಿ ಇತ್ತು. ಸದ್ಯಕ್ಕೆ ಆ ಚಿತ್ರ ಇನ್ನೂ ಟೇಕಾಫ್‌ ಆಗಿಲ್ಲ. ಈ ನಡುವೆ ಪ್ರಜ್ವಲ್‌ ದೇವರಾಜ್‌ ಅವರಿಗೆ ಸೂಟ್‌ ಆಗುವ ಪಕ್ಕಾ ಗ್ಯಾಂಗ್‌ಸ್ಟರ್‌ ಕತೆಯೊಂದನ್ನು ಮಾಡಿಕೊಂಡಿದ್ದು, ಪ್ರಜ್ವಲ್‌ ಅವರಿಗೂ ಕತೆ ಇಷ್ಟವಾಗಿ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ‘ಜಂಟಲ್‌ಮನ್‌’ ಚಿತ್ರೀಕರಣ ಮುಗಿದ ಕೂಡಲೇ ಪಿ ಸಿ ಶೇಖರ್‌ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ.

ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!

ಪ್ರಜ್ವಲ್‌ ಕೈಯಲ್ಲಿರುವ ಚಿತ್ರಗಳು

1. ಇನ್ಸ್‌ಪೆಕ್ಟರ್‌ ವಿಕ್ರಂ. ನಿರ್ದೇಶನ ಸಹನಾ ಮೂರ್ತಿ. ನಿರ್ಮಾಣ ವಿಖ್ಯಾತ್‌. (ಚಿತ್ರೀಕರಣ ಮುಗಿಸಿಕೊಂಡಿದೆ)

2. ಜಂಟಲ್‌ಮನ್‌. ನಿರ್ದೇಶನ ಜಡೇಶ್‌ ಕುಮಾರ್‌ ಹಂಪಿ. ನಿರ್ಮಾಣ ಗುರು ದೇಶಪಾಂಡೆ. (ಚಿತ್ರೀಕರಣ ನಡೆಯುತ್ತಿದೆ)

3 ಅರ್ಜುನ್‌ ಗೌಡ. ನಿರ್ದೇಶನ ಲಕ್ಕಿ ಶಂಕರ್‌. ನಿರ್ಮಾಣ ರಾಮು (ಚಿತ್ರೀಕರಣ ಮುಗಿಯುವ ಹಂತದಲ್ಲಿದೆ)

4. ರುಧೀರ (ಇತ್ತೀಚೆಗೆ ಮುಹೂರ್ತಗೊಂಡ ಸಿನಿಮಾ)