ಹೈದ್ರಾಬಾದ್(ಅ.22): ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರೋ ಖೈದಿ ನಂ 150 ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೇ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಮೆಗಾಸ್ಟಾರ್'ಗೆ ಬಾಹುಬಲಿ ಸ್ಟಾರ್ ಶಾಕ್ ಕೊಟ್ಟಿದ್ದಾರೆ. 

ಸದ್ಯ ಹೈದ್ರಾಬಾದ್ ನಲ್ಲಿ ನಡೆಯುತ್ತಿರೋ ಖೈದಿ ನಂ 150 ಸಿನಿಮಾ ಶೂಟಿಂಗ್ ಸ್ಫಾಟ್ ಗೆ ಬಾಹುಬಲಿ ಪ್ರಭಾಸ್ ಸರ್ ಪ್ರೈಜ್ ವಿಸೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೆಗಾಸ್ಟಾರ್ ಸಖತ್ ಖುಷಿಯಾಗಿದ್ದಾರೆ. 

ಈ ಕಡೆ ಮೆಗಾಸ್ಟಾರ್ ಕೂಡ ಪ್ರಭಾಸ್'ನ್ನ ತುಂಬ ಆತ್ಮೀಯವಾಗಿ ಭರಮಾಡಿಕೊಂಡಿದ್ದಾರೆ. ಪ್ರಭಾಸ್ ಸರ್ ಪ್ರೈಸ್ ವಿಸೀಟ್ ನೋಡಿ ಮೆಗಾಸ್ಟಾರ್ ಸಖತ್ ಥ್ರಿಲ್ ಆಗಿದ್ದಾರೆ. ನಿರ್ದೇಶಕ ಎಸ್ ಎಸ್ ರಾಜಮೌಳಿ ಪ್ರಭಾಸ್ ಗೆ ಸಾಥ್ ನೀಡಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ವಿ ವಿ ವಿನಾಯಕ್ ಖೈದಿ ನಂ 150 ಸಿನಿಮಾವನ್ನ ನಿರ್ದೇಶನ ಮಾಡ್ತಾ ಇದ್ದಾರೆ.