ಪವರ್'ಸ್ಟಾರ್ ಪುನೀತ್ ರಾಜ್ ಕುಮಾರ್, ಸ್ಯಾಂಡಲ್ ವುಡ್'ನ  ನಿರ್ಮಾಪಕರ ಲಕ್ಕಿ ಸ್ಟಾರ್. ಸದ್ಯಕ್ಕೆ ಪವರ್ ಸ್ಟಾರ್ ನಟನೆಯ ಅಂಜನೀಪುತ್ರ ಸಿನಿಮಾ ಶೂಟಿಂಗ್, ಅಡ್ಡದಿಂದ ಒಂದು ಬಿಗ್ ನ್ಯೂಸ್ ಹೊರ ಬಿದ್ದಿದೆ.

ಬೆಂಗಳೂರು (ನ.16): ಪವರ್'ಸ್ಟಾರ್ ಪುನೀತ್ ರಾಜ್ ಕುಮಾರ್, ಸ್ಯಾಂಡಲ್ ವುಡ್'ನ ನಿರ್ಮಾಪಕರ ಲಕ್ಕಿ ಸ್ಟಾರ್. ಸದ್ಯಕ್ಕೆ ಪವರ್ ಸ್ಟಾರ್ ನಟನೆಯ ಅಂಜನೀಪುತ್ರ ಸಿನಿಮಾ ಶೂಟಿಂಗ್, ಅಡ್ಡದಿಂದ ಒಂದು ಬಿಗ್ ನ್ಯೂಸ್ ಹೊರ ಬಿದ್ದಿದೆ.

ಪವರ್'ಸ್ಟಾರ್ ಪುನೀತ್ ಒಡೆತನದ ಪಿ'ಆರ್'ಕೆ ಆಡಿಯೋ ಸಂಸ್ಥೆ ಅಡಿಯಲ್ಲಿ ಅಂಜನೀಪುತ್ರ ಆಡಿಯೋವನ್ನ ಬಿಡುಗಡೆ ಮಾಡಲಾಗುತ್ತಿದೆ. ನ. 24ಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ, ಅಂಜನೀಪುತ್ರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುತ್ತದೆ. ಈ ಕಾರ್ಯಕ್ರಮದ ಸ್ಪೆಷಾಲಿಟಿ ಅಂದ್ರೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಿಗೆ ಗೌರವಿಸಲಾಗುತ್ತಿದೆ.

ಡಾ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ, ಪುನೀತ್ ಆಡಿಯೋ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ. ಅಂಜನೀಪುತ್ರ ಸಿನಿಮಾ ಮೂಲಕ ಪವರ್'ಸ್ಟಾರ್ ಇನ್ಮುಂದೆ ಪುನೀತ್ ಹಾಗೂ ಬೇರೆ ಸಿನಿಮಾಗಳ ಆಡಿಯೋವನ್ನ ಬಿಡುಗಡೆ ಮಾಡಲಿದ್ದಾರೆ..

ಪುನೀತ್ ರಾಜ್ ಕುಮಾರ್ ಆಡಿಯೋ ಸಂಸ್ಥೆ ಸ್ಟಾರ್ಟ್​ ಮಾಡಿದೆ ಬೆನ್ನಲ್ಲೇ, ಅಪ್ಪು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. PRK ಸಂಸ್ಥೆ ಅಡಿಯಲ್ಲಿ ಯೂ ಟ್ಯೂಬ್ ಚಾನಲ್'ವೊಂದು ಆರಂಭವಾಗಲಿದೆ. ಸದ್ಯಕ್ಕೆ ಅಂಜನೀಪುತ್ರ ಚಿತ್ರದ ಆಡಿಯೋ ಕಾರ್ಯಕ್ರಮವನ್ನ ನಿರ್ದೇಶಕ ಎ ಹರ್ಷ ವಿಭಿನ್ನವಾಗಿ ಪ್ಲಾನ್ ಮಾಡಿದ್ದಾರೆ. ಪೋಸ್ಟರ್'ನಿಂದಲೇ ಸೌಂಡ್ ಮಾಡುತ್ತಿರೋ ಅಂಜನೀಪುತ್ರ ಸಿನಿಮಾ ಡಿಸೆಂಬರ್ ಮೂರನೇ ವಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.