ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಬಿಗ್ ಸ್ಟಾರ್ ಓರ್ವರು ತಮ್ಮ ನಿರ್ಧಾರವನ್ನು ಪ್ರಕಟ ಮಾಡಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರರಂಗ ತೊರೆದು ಸಾರ್ವಜನಿಕ ಸೇವೆಗೆ ಇಳಿಯುವ ನಿರ್ಧಾರ ಮಾಡಿದ್ದಾರೆ. 

ಹೈದ್ರಾಬಾದ್ : ನಟ ಪವನ್ ಕಲ್ಯಾಣ್ ಇದೀಗ ಬಹುದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಮಿಳು ನಟ ರಜನಿಕಾಂತ್ , ಕಮಲ್ ಹಾಸನ್ ಅವರು ನಟನೆಯೊಂದಿಗೆ ರಾಜಕೀಯವಾಗಿಯೂ ಕೂಡ ಸಕ್ರೀಯವಾಗಿರುವ ಬೆನ್ನಲ್ಲೇ ಪವನ್ ಕಲ್ಯಾಣ್ ಸಂಪೂರ್ಣ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸುವ ತೀರ್ಮಾನ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ತೆಲುವು ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪವನ್ ಕಲ್ಯಾಣ್ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದು, ಇನ್ನು ಮುಂದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಮಯವಿದು ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನುಮುಂದೆ ಯಾವುದೇ ಚಿತ್ರಕ್ಕೆ ಸಹಿ ಮಾಡುವುದಿಲ್ಲ. ಯಾವುದೇ ಚಿತ್ರದ ಭಾಗವಾಗುವುದಿಲ್ಲ. ಇದಕ್ಕೆ ನನಗೆ ಸಮಯವೂ ಕೂಡ ಇಲ್ಲ ಎಂದಿದ್ದಾರೆ. 

ನನ್ನ ಅಭಿಮಾನಿಗಳು ಹಾಗೂ ಜನ ಸೈನಿಕರೊಂದಿಗೆ ಇದೀಗ ಸಾರ್ವಜನಿಕ ಸೇವೆಗ ಇಳಿಯುತ್ತೇನೆ. ನನ್ನ ಮುಂದಿನ ಪ್ರತಿಯೊಂದು ಯೋಚನೆಯೂ ಕೂಡ ಸಾರ್ವಜನಿಕ ಸೇವೆಯ ಬಗೆಯಾಗಿರುತ್ತದೆ ಎಂದು ಹೇಳಿದ್ದಾರೆ. 

ಕಳೆದ 2014ರಲ್ಲಿ ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಸ್ಥಾಪಿಸುವ ಮೂಲಕ ನಟರಾಗಿದ್ದವರು, ರಾಜಕಾರಣಿಯೂ ಆದರು. ಅವರ ಈ ನಿರ್ಧಾರದ ಪ್ರಕಾರ ಪವನ್ ನಟಿಸಿದ ಅಜ್ಞಾತವಾಸಿ ಅವರ ಕೊನೆಯ ಚಿತ್ರವಾಗಿದೆ. 

Scroll to load tweet…