ಸುದೀಪ್ ನಾಯಕಿಗೆ ನಿನ್ನ ರೇಟ್ ಎಷ್ಟು ಎಂದಿದ್ದ ಕಾಮುಕ : ಮುಂದೇನಾಯ್ತು ?

Police arrest man after complaint from Amala Paul
Highlights

ಬಹು ಭಾಷೆ ನಟಿ ಅಂದ್ರೆ ತಪ್ಪೇ ಇಲ್ಲ. ಅಷ್ಟು ಚೆಂದದ ಈ ನಟಿಮಣಿ ತಮಿಳು, ತೆಲುಗು ಸಿನಿಮಾಗಳಲ್ಲಿ ಅತ್ಯಂತ ಬೇಡಿಕೆಯ ನಟಿ.ಕನ್ನಡದ ಹೆಬ್ಬುಲಿ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟದ್ದು ಎಲ್ಲಿಗೂ ಗೊತ್ತೆ ಇದೆ.

ಸಿನಿಮಾರಂಗ ಒಂದು ಮಾಯಾ ಜಗತ್ತು. ಈ ಲೋಕದಲ್ಲಿ ಏನೇನೋ ಆಗುತ್ತದೆ.ಇನ್ನೇನೋ ಹೊರಗೆ ಬರೋದಿಲ್ಲ.ನಟಿಮಣಿಯರು ಆ ಅನುಭವದಿಂದಲೇ ಹಾದು ಬಂದಿರ್ತಾರೆ. ಈ ಮೊದಲು ಯಾರೂ ಅದನ್ನ ಹೇಳೋ ಧೈರ್ಯ ಮಾಡ್ತಿರಲಿಲ್ಲ. ಈಗ ಅವರ ಮನಸ್ಸು ಗಟ್ಟಿಯಾಗಿವೆ. ಒಬ್ಬೊರಾಗಿಯೇ ಈಗ ಲೈಂಗಿಕ ಕಿರುಕುಳದ ವಿರುದ್ದ ಧ್ವನಿ ಎತ್ತುತ್ತಿದ್ದಾರೆ. ಈಗ ಅಂತಹದ್ದೆ ಒಂದು ಸಿಡಿದೆದ್ದ ಕಥೆ ಇದೆ.

ಅಮಲಾ ಪೌಲ್. ಸುಂದರಿ. ಎಂತಹವರೂ ಕಳೆದು ಹೋಗೋ ಚೆಲುವು.ತೆರೆ ಮೇಲೆ ಈಕೆಯ ನಟನೆ ಚೆಂದದ ಭಾವ ಮೂಡಿಸುತ್ತದೆ. ನೋಡಲು ಸಾಫ್ಟ್ ಸಾಫ್ಟ್ ಆಗಿಯೇ ಇದ್ದಾರೆ. ಬಹು ಭಾಷೆ ನಟಿ ಅಂದ್ರೆ ತಪ್ಪೇ ಇಲ್ಲ. ಅಷ್ಟು ಚೆಂದದ ಈ ನಟಿಮಣಿ ತಮಿಳು, ತೆಲುಗು ಸಿನಿಮಾಗಳಲ್ಲಿ ಅತ್ಯಂತ ಬೇಡಿಕೆಯ ನಟಿ.ಕನ್ನಡದ ಹೆಬ್ಬುಲಿ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟದ್ದು ಎಲ್ಲಿಗೂ ಗೊತ್ತೆ ಇದೆ.

ಅಮಲಾ ಪೌಲ್ ಸಿಡಿದೆದ್ದಿದ್ದಾರೆ.ಆ ಸಿಟ್ಟಿಗೆ ಒಂದು ಕಾರಣ ಇದೆ. ಆ ಕಾರಣ ಕೇಳಿದ್ರೆ ನಿಮಗೂ ಸಿಟ್ಟು ಬರುತ್ತದೆ. ಸೌಮ್ಯ ಲುಕ್ ಇರೋ ಅಮಾಲಾ ಪೌಲ್'ಗೂ ಆ ಕಾಟವೆ ಅನ್ನೋ ಪ್ರಶ್ನೆ ನಿಮಗೂ ಮೂಡದೇ ಇರದು. ಯಾಕೆಂದರೆ, ಎಲ್ಲ ನಟಿಮಣಿಯರು ಅದನ್ನು ಎದುರಿಸುತ್ತಲೇ ಇದ್ದಾರೆ. ಆದರೆ, ಈಗೀಗ ಅದನ್ನ ಧೈರ್ಯದಿಂದಲೇ ಹೊರಗೆ ಹಾಕುತ್ತಿದ್ದಾರೆ. ಅದರ ವಿರುದ್ಧ ಸಿಡಿದೇಳುತ್ತಿದ್ದಾರೆ. ಅಮಲಾ ಪೌಲ್ ಮಾಡಿದ್ದು ಈಗ ಅದನ್ನೇ.

ಹೌದು..!ಅಮಲಾ ಪೌಲ್'ಗೂ ಲೈಂಗಿಕ ಕಿರುಕುಳ ಆಗಿದೆ. ಅದನ್ನ ಸಹಿಸಿಕೊಂಡು ಸುಮ್ಮನೆ ಕುಳಿತಿಲ್ಲ ಅಮಲಾ. ಅದನ್ನ ತೀವ್ರವಾಗಿ ವಿರೋಧಿಸಿದ್ದಾರೆ.ವಿರೋಧಿಸಿದ್ದಲ್ಲದೆ ಪೊಲೀಸ್ ಕಂಪ್ಲೆಂಟ್ ಕೂಡ ಕೊಟ್ಟಿದ್ದಾರೆ.ಅದಕ್ಕೆ ಪೊಲೀಸರು ಸ್ಪಂದಿಸಿದ್ದಾರೆ. ಅದರ ಫಲ ಅಮಲಾಗೆ ಕಿರುಕುಳ ಕೊಟ್ಟ ವ್ಯಕ್ತಿ ಅರೆಸ್ಟ್ ಆಗಿದ್ದಾನೆ. ಇಷ್ಟಕ್ಕೂ ಅವನು ಕೊಟ್ಟ ಕಾಟ ಎಂಥಾದ್ದು ಅಂತ ಕೇಳಿದ್ರೆ ಬೆಚ್ಚಿಬೀಳ್ತೀರಿ.

ಎಷ್ಟು ನಿನ್ನ ರೇಟ್ ? ಅಂದಿದ್ದ ವ್ಯಕ್ತಿ !
ಅಮಲಾ ಪೌಲ್ ಚೆನ್ನೈನ ಸ್ಟುಡಿಯೋದಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದು. ಹೆಸರಾಂತ ಕೋರಿಯೋಗ್ರಾಫರ್ ಶ್ರೀಧರ್ ಅವರ ಸ್ಟುಡಿಯೋ ಅದು. ಮಲೇಷಿಯಾದಲ್ಲಿ ನಡೆಯಲಿರೋ ವುಮೆನ್ ಎಪವರ್'ಮೆಂಟ್ ಕಾರ್ಯಕ್ರಮದಲ್ಲಿ ನೃತ್ಯ ಮಾಡೋಕೇನೆ ಅಮಲಾ ಇಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದರು. ಆದರೆ, ಅದೆಲ್ಲಿಂದಲೋ ಬಂದ ಆ ವ್ಯಕ್ತಿ. ಆತನ ಹೆಸರು ಅಳಗೇಷನ್. ಹೆಚ್ಚು ಕಡಿಮೆ 40 ವರ್ಷ ಆಗಿರಬೇಕು. ಬಂದವನೆ ಅಮಲಾ ಪೌಲ್'ಗೆ ಎಷ್ಟು ನಿನ್ನ ರೇಟ್ ಅಂತ ಕೇಳಿಯೇ ಬಿಡೋದೆ. ಆ ಮಾತ್ ಕೇಳಿದ ಅಮಲಾ ಪೌಲ್ ಆಗ ಫುಲ್ ಶಾಕ್. ಹಾಗೆ ಈ ವ್ಯಕ್ತಿ ಆ ಪ್ರಶ್ನೆ ಕೇಳೋವಾಗ ಅಲ್ಲಿ ಯಾರೂ ಇರಲಿಲ್ವಂತೆ. ಹಿಂಗೆ ರೇಟ್ ಕೇಳಿ ಮುಜುಗರ ಮತ್ತು ಭಯ ಹುಟ್ಟಿಸಿದ್ದ ಆ ವ್ಯಕ್ತಿ. ಅಸಭ್ಯವಾಗಿಯೂ ನಡೆದುಕೊಂಡಿದ್ದಾನೆ.

ಆದರೆ, ಅಮಲಾ ನಂತರ ಸುಮನೆ ಕುಳಿತಿಲ್ಲ. ಚೆನ್ನೈನ ಪಾಂಡಿ ಬಜಾರ್'ನ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.ದೂರನ್ನ ತೆಗೆದುಕೊಂಡ ಪೊಲೀಸರು ತನಿಖೆ ಮಾಡಿದ್ದಾರೆ. ಅ ವ್ಯಕ್ತಿಯನ್ನೂ ಸದ್ಯಕ್ಕೆ ಅರೆಸ್ಟ್ ಮಾಡಿದ್ದಾರೆ. ಹೀಗೆ ಅಮಲಾ ಪೌಲ್ ತಮ್ಮಗಾದ ತೊಂದರೆ ವಿರುದ್ಧ ಪ್ರತಿಭಟಿಸಿದ್ದಾರೆ. ಬೇರೆ ನಟಿಮಣಿಯರಿಗೂ ಮಾಧರಿ ಆಗಿದ್ದಾರೆ. ಇದನ್ನ ಕೇಳಿದ್ಮೇಲೆ ಬೇರೆ ನಟಿಯರೂ ಅದನ್ನ ಫಾಲೋ ಮಾಡಿದರೆ ಇನ್ನೂ ಒಳ್ಳೆಯದು ಅಲ್ಲವೆ.

-ರೇವನ್ ಪಿ.ಜೇವೂರ್, ಎಂಟರ್'ಟೈನ್'ಮೆಂಟ್​ ಬ್ಯೂರೋ, ಸುವರ್ಣ ನ್ಯೂಸ್

loader