ನವದೆಹಲಿ (ಡಿ. 19):  ಬಾಲಿವುಡ್ ನಿರ್ಮಾಪಕರು ಹಾಗೂ ಕಲಾವಿದರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. 

 

ಚಿತ್ರರಂಗದ ಬಗ್ಗೆ ಪ್ರಧಾನಿಯವರ ಜೊತೆ ಮಾತುಕತೆ ನಡೆಸಿದರು. ನಿರ್ಮಾಪಕ ರಿತೇಶ್ ಸಿದ್ವಾನಿ, ಕರಣ್ ಜೋಹರ್, ಸಿದ್ಧಾರ್ಥ್ ರಾಯ್ ಕಪೂರ್, ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್ ಸೇರಿದಂತೆ ಕೆಲವು ಮಂದಿ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಆಶ್ಚರ್ಯ ಎಂದರೆ ಈ ಸಭೆಯಲ್ಲಿ ಒಬ್ಬರೇ ಒಬ್ಬ ಮಹಿಳಾ ಪ್ರತಿನಿಧಿಗಳಿಲ್ಲದೇ ಇರುವುದು ಜಾಲತಾಣಿಗರ ಆಕ್ರೋಶಕ್ಕೆ ಕಾರಣವಾಗಿದೆ.