ಪ್ಲಾಸ್ಟಿಕ್ ಮುಕ್ತ ಭಾರತದತ್ತ ಮೋದಿ ಕನಸು | Single Use Plastic ಅಭಿಯಾನಕ್ಕೆ ಅಮೀರ್ ಖಾನ್ ಸಾಥ್ | ದೇಶದ ಜನರಿಗೆ ಕೈ ಜೋಡಿಸುವಂತೆ ಕರೆ 

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು ಪರಿಸರ ಮಾಲಿನ್ಯ ಮಿತಿಮೀರುತ್ತಿದೆ. ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಪ್ರಧಾನಿ ಕರೆಗೆ ಬಾಲಿವುಡ್ ನಟ ಅಮೀರ್ ಖಾನ್ ಬೆಂಬಲ ಸೂಚಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೀರ್ ಖಾನ್ ಗೆ ಪ್ರಧಾನಿ ಮೋದಿ ಥ್ಯಾಂಕ್ಸ್ ಹೇಳಿದ್ದಾರೆ. ಸಿಂಗಲ್ ಪ್ಲಾಸ್ಟಿಕ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಸ್ಫೂರ್ತಿದಾಯಕ ಮಾತುಗಳು ಬೇರೆಯವರಿಗೆ ಸ್ಫೂರ್ತಿ ನೀಡುವಂತಿದೆ. ಬೇರೆಯವರು ಈ ಅಭಿಯಾನಕ್ಕೆ ಬೆಂಬಲ ನೀಡುವಂತೆ ಮಾಡುತ್ತವೆ ಎಂದು ಮೋದಿ ಹೇಳಿದ್ದಾರೆ. 

Scroll to load tweet…

ಪ್ರಧಾನಿ ಮೋದಿಯವರು ಶುರು ಮಾಡಿದ Single Use Plastic ಅಭಿಯಾನಕ್ಕೆ ಅಮೀರ್ ಖಾನ್ ಬೆಂಬಲಿಸುತ್ತಾ, ಮೋದಿಯವರ ಪ್ರಯತ್ನಕ್ಕೆ ನಾವೆಲ್ಲಾ ಬೆಂಬಲಿಸಬೇಕು. ನಾವು ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸುವುದಾಗಿ ಪಣ ತೊಡಬೇಕು ಎಂದು ಹೇಳಿದ್ದರು. ಇಂತಹ ಪ್ರಯತ್ನಕ್ಕೆ ಅಮೀರ್ ಯಾವಾಗಲೂ ಬೆಂಬಲ ನೀಡುತ್ತಾರೆ. 

Single Use Plastic: ಮೋದಿ ಅಭಿಯಾನಕ್ಕೆ ಅಮೀರ್ ಖಾನ್ ಸಾಥ್!

‘ನಾವು ಈ ವರ್ಷ ಬಾಪುರವರ 150 ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಬಯಲು ವಿಸರ್ಜನೆ ಮುಕ್ತ ಮಾತ್ರವಲ್ಲ ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿ ಮಾಡೋಣ. ಆ ಮೂಲಕ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸೋಣ ಎಂದು ಮೋದಿ ಮನ್ ಕಿ ಬಾತ್ ನಲ್ಲಿ ಕರೆ ನೀಡಿದ್ದರು.