Single Use Plastic: ಮೋದಿ ಅಭಿಯಾನಕ್ಕೆ ಅಮೀರ್ ಖಾನ್ ಸಾಥ್!
ಪ್ಲಾಸ್ಟಿಕ್ ಮುಕ್ತ ಭಾರತದತ್ತ ಮೋದಿ ಕನಸು | Single Use Plastic ಅಭಿಯಾನಕ್ಕೆ ಅಮೀರ್ ಖಾನ್ ಸಾಥ್ | ದೇಶದ ಜನರಿಗೆ ಕೈ ಜೋಡಿಸುವಂತೆ ಕರೆ
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು ಪರಿಸರ ಮಾಲಿನ್ಯ ಮಿತಿಮೀರುತ್ತಿದೆ. ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಪ್ರಧಾನಿ ಕರೆಗೆ ಬಾಲಿವುಡ್ ನಟ ಅಮೀರ್ ಖಾನ್ ಬೆಂಬಲ ಸೂಚಿಸಿದ್ದಾರೆ. Single Use Plastic ಅಭಿಯಾನಕ್ಕೆ ಅಮೀರ್ ಖಾನ್ ಬೆಂಬಲಿಸುತ್ತಾ, ಮೋದಿಯವರ ಪ್ರಯತ್ನಕ್ಕೆ ನಾವೆಲ್ಲಾ ಬೆಂಬಲಿಸಬೇಕು. ನಾವು ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸುವುದಾಗಿ ಪಣ ತೊಡಬೇಕು ಎಂದು ಹೇಳಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಪ್ಲಾಸ್ಟಿಕ್ ವಿರುದ್ಧ ಹೊಸ ಕ್ರಾಂತಿಯನ್ನು ಶುರು ಮಾಡೋಣ ಎಂದು ದೇಶದ ಜನತೆಗೆ ಕರೆ ಕೊಟ್ಟಿದ್ದರು. ಅಕ್ಟೋಬರ್ 2, ಗಾಂಧಿ ಜಯಂತಿ ದಿನದಿಂದ ಈ ಅಭಿಯಾನವನ್ನು ಪ್ರಾರಂಭಿಸೋಣ ಎಂದು ಕರೆ ನೀಡಿದ್ದಾರೆ.
ನಾವು ಈ ವರ್ಷ ಬಾಪುರವರ 150 ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಬಯಲು ವಿಸರ್ಜನೆ ಮುಕ್ತ ಮಾತ್ರವಲ್ಲ ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿ ಮಾಡೋಣ. ಆ ಮೂಲಕ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸೋಣ ಎಂದಿದ್ದಾರೆ.
ಪ್ಲಾಸ್ಟಿಕನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಕಾರ್ಪೋರೇಟ್ ವಲಯದವರಿಗೆ ಕೇಳಿಕೊಂಡಿದ್ದಾರೆ.