ದೆಹಲಿ (ಆ. 13): ಪ್ರಧಾನಿ ನರೇಂದ್ರ ಮೋದಿ ಬಹುನಿರೀಕ್ಷಿತ ಮ್ಯಾನ್‌ ವರ್ಸಸ್‌ ವೈಲ್ಡ್‌’ ನ್ನು ಇಡೀ ದೇಶ ನೋಡಿದೆ. ಉತ್ತರಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಮೋದಿ ಸಾಹಸಕ್ಕೆ ಜೈ ಎಂದಿದ್ದಾರೆ.  

ದಟ್ಟಾರಣ್ಯದಲ್ಲಿ ಮೋದಿ ಸಾಹಸ, ಸೋಶಿಯಲ್ ಮೀಡಿಯಾ ರಿಯಾಕ್ಷನ್ ಅಬ್ಬಬ್ಬಾ!

ನರೇಂದ್ರ ಮೋದಿ ಭಾರತದ ಪರಂಪರೆ, ಸಂಸ್ಕೃತಿಯ ಪಾಠ ಮಾಡಿದ್ದಾರೆ. ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ನಲ್ಲಿ ಒಂದೊಂದೆ ಹೆಜ್ಜೆ ಇಡುತ್ತ ದೇಶದ ಕತೆಯನ್ನು, ತಮ್ಮ ಹಿಮಾಲಯದ ಜೀವನದ ಕತೆಯುನ್ನು ತೆರೆದಿರಿಸಿದ್ದಾರೆ. ಸೋಶಿಯಲ್ ಮೀಡಿಯಾ ಸಹ ಮೋದಿ ಗುಣಗಾನ ಮಾಡಿದೆ. 

ಮೋದಿ ಸಾಹಸವನ್ನು ಬಾಲಿವುಡ್ ಮಂದಿ ಶ್ಲಾಘಿಸಿದ್ದಾರೆ. ಬಾಲಿವುಡ್ ನ ಕರಣ್ ಜೋಹರ್, ಅಕ್ಷಯ್ ಕುಮಾರ್, ಅನಿಲ್ ಕಪೂರ್, ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ಮಂದಿ ಮೋದಿ ನಡೆಯನ್ನು ಶ್ಲಾಘಿಸಿದ್ದಾರೆ.