ದಟ್ಟಾರಣ್ಯದಲ್ಲಿ ಮೋದಿ ಸಾಹಸ, ಸೋಶಿಯಲ್ ಮೀಡಿಯಾ ರಿಯಾಕ್ಷನ್ ಅಬ್ಬಬ್ಬಾ!
ನರೇಂದ್ರ ಮೋದಿ ಭಾರತದ ಪರಂಪರೆ, ಸಂಸ್ಕೃತಿಯ ಪಾಠ ಮಾಡಿದ್ದಾರೆ. ‘ಮ್ಯಾನ್ ವರ್ಸಸ್ ವೈಲ್ಡ್’ ನಲ್ಲಿ ಒಂದೊಂದೆ ಹೆಜ್ಜೆ ಇಡುತ್ತ ದೇಶದ ಕತೆಯನ್ನು, ತಮ್ಮ ಹಿಮಾಲಯದ ಜೀವನದ ಕತೆಯುನ್ನು ತೆರೆದಿರಿಸಿದ್ದಾರೆ. ಸೋಶಿಯಲ್ ಮೀಡಿಯಾ ಸಹ ಮೋದಿ ಗುಣಗಾನ ಮಾಡಿದೆ.
ನವದೆಹಲಿ[ಆ.12] ಡಿಸ್ಕವರಿಯಲ್ಲಿ ಪ್ರಸಾರವಾದ ‘ಮ್ಯಾನ್ ವರ್ಸಸ್ ವೈಲ್ಡ್’ ನರೇಂದ್ರ ಮೋದಿ ಅವರ ಅರಣ್ಯ ಸಾಹಸವನ್ನು ಸೋಶಿಯಲ್ ಮೀಡಿಯಾ ಕೊಂಡಾಡಿದೆ. ಕಾರ್ಯಕ್ರಮ ವೀಕ್ಷಣೆ ಮಾಡಿದ ಲಕ್ಷಾಂತರ ಮಂದಿ ಟ್ವಿಟ್ ಮೂಲಕ ತಮ್ಮ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
ನರೇಂದ್ರ ಮೋದಿ ತಮ್ಮ ಹಿಮಾಲಯ ಜೀವನದ ಘಟನಾವಳಿಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಸಂಸ್ಕೃತಿ, ಪರಿಸರದ ಪಾಠವನ್ನು ಕಾರ್ಯಕ್ರದ ಮುಖೇನ ಮಾಡಿದ್ದಾರೆ. ಪ್ರಸಿದ್ಧ ಸಾಹಸಿಗ ಬೆಯರ್ ಗ್ರಿಲ್ಸ್ ಅವರು ನಡೆಸಿಕೊಡುವ ‘ಮ್ಯಾನ್ ವರ್ಸಸ್ ವೈಲ್ಡ್’ ಸಂಚಿಕೆ 9 ಗಂಟೆಯಿಂದ ಪ್ರಸಾರವಾಗಿದ್ದು ಡಿಸ್ಕವರಿ ಸಮೂಹದ 12 ಚಾನೆಲ್‌ಗಳಲ್ಲಿ ವಿಶ್ವದ 180 ದೇಶಗಳಲ್ಲಿ ಏಕಕಾಲದಲ್ಲಿ ಪ್ರಸಾರವಾಗಿದೆ.
ನನ್ನ ಹೆಸರು ಹೇಳದೆ ಚುನಾವಣೆ ಗೆಲ್ಲಿ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಕಾಶ್ ಜಾವಡೇಕರ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.