ಪ್ರಿಯಾಂಕಾ- ನಿಕ್ ಅದ್ಧೂರಿ ವಿವಾಹ: ಇಲ್ಲಿವೆ ನೋಡಿ 3 ದಿನದ ಫೋಟೋಗಳು

First Published 5, Dec 2018, 2:23 PM

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್‌ ಗಾಯಕ ನಿಕ್‌ ಜೋನ್ಸ್‌ ಹಿಂದು ಸಂಪ್ರದಾಯದಂತೆ ಇಲ್ಲಿನ ಉಮೇದ್‌ ಭವನ್‌ ಅರಮನೆಯಲ್ಲಿ ಸೋಮವಾರ ಮುಂಜಾನೆ ವಿವಾಹ ಆಗಿದ್ದಾರೆ. ಸದ್ಯ ಈ ಜೋಡಿಯ ಮದುವೆ ಫೋಟೋಗಳು ವೈರಲ್ ಆಗಿದ್ದು, ಕ್ರೈಸ್ತ ಹಾಗೂ ಹಿಂದು ಸಂಪ್ರದಾಯದಂತೆ ನಡೆದ ಮದುವೆ ಸಂಭ್ರಮದ ಫೋಟೋಗಳು ಇಲ್ಲಿವೆ ನೋಡಿ

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಬಹುದಿನಗಳ ಸ್ನೇಹಿತ ನಿಕ್‌ ಜೋನ್ಸ್‌ ಅವರ ಜೊತೆ ಶನಿವಾರದಂದು ಕ್ರೈಸ್ತ ಸಂಪ್ರದಾಯದಂತೆ ಇಲ್ಲಿನ ಉಮೇದ್‌ ಭವನ ಪ್ಯಾಲೇಸ್‌ನಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟರು.

ನಿಕ್‌ ಜೋನ್ಸ್‌ ಅವರ ಕ್ರೈಸ್ತ ಧರ್ಮ ಸಂಪ್ರದಾಯದ ಪ್ರಕಾರ ಈ ನವ ಜೋಡಿಯು ಪರಸ್ಪರ ಉಂಗುರ ತೊಡಿಸುವ ಮೂಲಕ ವಿವಾಹವಾಯಿತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮತ್ತು ಜೋನ್ಸ್‌ ಅವರು ರಾಲ್ಫ್ ಲಾರೆನ್‌ ವಿನ್ಯಾಸಗೊಳಿಸಿದ್ದ ಉಡುಗೆಗಳನ್ನು ತೊಟ್ಟು ಮಿಂಚಿದರು.

ಭಾನುವಾರ ಸಂಜೆ ಪ್ರಿಯಾಂಕಾ ಹಾಗೂ ನಿಕ್‌ ಜಂಟಿಯಾಗಿ ಸಂಗೀತ ಸಮಾರಂಭ ನಡೆಸಿಕೊಟ್ಟಿದ್ದರು.

ಸೋಮವಾರದಂದು ನಡೆದ ಅದ್ದೂರಿ ವಿವಾಹ ಸಮಾರಂಭಕ್ಕೆ ಪ್ರಿಯಾಂಕಾ ಕೆಂಪು ಸೀರೆಯಲ್ಲಿ ಕಂಗೊಳಿಸಿದರೆ, ನಿಕ್‌ ಜೋನ್ಸ್‌ ಸಾಂಪ್ರದಾಯಿಕ ಉಡುಗೆ ಹಾಗೂ ಟರ್ಬನ್‌ ಧರಿಸಿದ್ದರು.

ವಿವಾಹ ಸಮಾರಂಭದ ಬಳಿಕ ಪ್ರಿಯಾಂಕಾ ಹಾಗೂ ನಿಕ್‌ ಜೈಪುರವನ್ನು ಬಿಟ್ಟಿದ್ದು, ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಮಂಗಳವಾರದಂದು ಪ್ರಿಯಾಂಕಾ ಹಾಗೂ ನಿಕ್ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು ಪ್ರಧಾನಿ ಮೋದಿ ಭಾಗವಹಿಸಿದ್ದರು.

ಅದ್ಧೂರಿಯಾಗಿ ನಡೆದ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಜ್ರದ ಸರ ವಿಶೇಷ ಮೆರುಗು ನೀಡಿತ್ತು.