ಪೂನಮ್ಮಂಗೆ ಕಾಂಡೋಮ್ ಬ್ಯಾನ್ ಆಗೋ ಭಯವೇಕೆ?

Plastic Ban: Poonam Pandey asks if condoms are included in banned items
Highlights

ಪ್ಲ್ಯಾಸ್ಟಿಕ್ ಬ್ಯಾನ್ ಕುಹುಕವಾಡಿದ ಪೂನಂ ಪಾಂಡೆ

ಕಾಂಡೋಮ್ ಕೂಡ ನಿಷೇಧವಾಗುತ್ತಾ ಎಂದ ಪೂನಂ

ಪ್ಲ್ಯಾಸ್ಟಿಕ್ ಸರ್ಜರಿ ಕುರಿತು ಪೂನಂ ಪಾಂಡೆ ವ್ಯಂಗ್ಯ

ಪೂನಂ ಟ್ವಿಟ್ ಗೆ ನೆಟಿಜನ್ಸ್ ಉತ್ತರವೇನು?

ಮುಂಬೈ(ಜೂ.26): ನಟಿ ಪೂನಮ್ ಪಾಂಡೆಗೆ ಯಾವಾಗ ಸುದ್ದಿಯಲ್ಲಿರಬೇಕು ಎಂಬುದು ಬಹುಶಃ ಚೆನ್ನಾಗಿ ಗೊತ್ತಿದ್ದಂತಿದೆ. ಮಹಾರಾಷ್ಟ್ರದಲ್ಲಿ ಪ್ಲ್ಯಾಸ್ಟಿಕ್ ಬ್ಯಾನ್ ಆಗ್ತಿದ್ದೇ ತಡ ಪೂನಮ್ ರಾಜ್ಯ ಸರ್ಕಾರಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದ್ದಾಳೆ.

ಏನಪ್ಪಾ ಅಂತಾ ಪ್ರಶ್ನೆ ಅಂತೀರಾ?. ರಾಜ್ಯದಲ್ಲಿ ಪ್ಲ್ಯಾಸ್ಟಿಕ್ ಬ್ಯಾನ್ ಸುದ್ದಿ ಕೇಳಿ ಸಂತಸವಾಗಿದೆ. ಆದರೆ ಈ ನಿಷೇಧ ಕಾಂಡೋಮ್ ಮೇಲೂ ಇದೆಯಾ ಎಂದು ಪೂನಮ್ಮ ಪ್ರಶ್ನೆ ಎಸೆದಿದ್ದಾಳೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತು ಪ್ರಶ್ನೆ ಕೇಳಿರುವ ಪೂನಮ್ ಪಾಂಡೆ, ಕಾಂಡೋಮ್ ಕೂಡ ನಿಷೇಧದ ಪಟ್ಟಿಯಲ್ಲಿ ಇದೆಯೇ ಎಂದು ಪ್ರಶ್ನಿಸಿದ್ದಾಳೆ.

ಅಲ್ಲದೇ ಪ್ಲ್ಯಾಸ್ಟಿಕ್ ಬ್ಯಾನ್ ಕುರಿತು ಅಪಹಾಸ್ಯ ಮಾಡಿರುವ ಪೂನಮ್, ಯಾರೆಲ್ಲಾ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೋ ಅವರೆಲ್ಲಾ ರಸ್ತೆ ಮೇಲೆ ಓಡಾಡಬೇಡಿ ಎಂದು ಕುಹುಕವಾಡಿದ್ದಾಳೆ. ಇನ್ನು ಪೂನಮ್ ಟ್ವಿಟ್ ಗೆ ನೆಟಿಜನ್ ಗಳು ತರಹೇವಾರಿ ಪ್ರತಿಕ್ರಿಯೆ ನೀಡಿದ್ದು, ಕಾಂಡೋಮ್ ಬ್ಯಾನ್ ಆಗಲ್ಲ ಬಿಡಮ್ಮ ಅಂತಾ ಆಕೆಯನ್ನು ಸಂತೈಸಿದ್ದಾರೆ.
 

loader