ಬೆಂಗಳೂರು (ಫೆ. 23): ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ಎಷ್ಟೇ ಬ್ಯುಸಿಯಾಗಿದ್ದರೂ ಅಭಿಮಾನಿಗಳು ಭೇಟಿಯಾಗಬೇಕು ಎಂದು ಹೇಳಿದರೆ ಇಲ್ಲ ಎಂದು ಹೇಳುವುದೇ ಇಲ್ಲ. ಎಷ್ಟೋ ಬಾರಿ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. 

ಇದೀಗ ಸುದೀಪ್ ಹೃದಯ ಈ ಪುಟ್ಟ ವಿಶೇಷ ಚೇತನ ಮಗುವನ್ನು ಭೇಟಿ ಮಾಡಲು ಮಿಡಿಯುತ್ತಿದೆ. ವಿಶೇಷ ಚೇತನ ಮಗುವೊಂದು ಸುದೀಪ್ ರನ್ನು ಭೇಟಿಯಾಗಬೇಕೆಂಬ ಅದಮ್ಯ ಆಸೆಯನ್ನು ವ್ಯಕ್ತಪಡಿಸಿದೆ. ಅವರ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದೆ. ‘ಸುದೀಪ್ ಮಾಮಾ, ನಿಮ್ಮನ್ನು ಮಾತಾಡಿಸಬೇಕು. ಬನ್ನಿ’ ಎಂದು ಮುದ್ಮುದ್ದಾಗಿ ಹೇಳಿದ್ದಾಳೆ. ಈ ವಿಡಿಯೋವನ್ನು ಸುದೀಪ್ ಟ್ವಿಟರ್ ಗೆ ಟ್ಯಾಗ್ ಮಾಡಲಾಗಿದೆ. 

 


ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸುದೀಪ್, ‘ಈ ಪುಟಾಣಿಯ ಪ್ರೀತಿಗೆ ಖುಷಿಪಡಬೇಕೋ, ಈಕೆಯ ಸ್ಥಿತಿಗೆ ದುಃಖಿಸಬೇಕೋ ಗೊತ್ತಾಗುತ್ತಿಲ್ಲ. ಈ ವಿಡಿಯೋವನ್ನು ನನಗೆ ತಲುಪಿಸಿದ್ದಕ್ಕೆ ಧನ್ಯವಾದಗಳು. ಈ ಮಗು ಎಲ್ಲಿದ್ದಾಳೆ‘? ಎಂದು ಟ್ವೀಟ್ ಮಾಡಿದ್ದಾರೆ.