ಆಕಸ್ಮಿಕವಾಗಿ ನಡೆದ ಘಟನೆಯೊಂದು ಕಿರುತೆರೆ ನಟಿಯನ್ನು ಹಿರಿತೆರೆಗೆ ಎಳೆತರುತ್ತಿದೆ. ಆ ಘಟನೆ ಏನು ಗೊತ್ತೇ? ಫೋಟೋಶೂಟ್. ಹೀಗೊಂದು ಆರ್ ಸಿಕ್ಕಿದ್ದು ಹಿಂದಿಯ ‘ಗೋಪಿ ಬಹು’ ಧಾರಾವಾಹಿಯ ನಟಿ ದೆವೊಲೀನ ಭಟ್ಟಾಚಾರ್ಜಿಗೆ.

ಮುಂಬೈ(ಸೆ.26): ಆಕಸ್ಮಿಕವಾಗಿ ನಡೆದ ಘಟನೆಯೊಂದು ಕಿರುತೆರೆ ನಟಿಯನ್ನು ಹಿರಿತೆರೆಗೆ ಎಳೆತರುತ್ತಿದೆ. ಆ ಘಟನೆ ಏನು ಗೊತ್ತೇ? ಫೋಟೋಶೂಟ್. ಹೀಗೊಂದು ಆರ್ ಸಿಕ್ಕಿದ್ದು ಹಿಂದಿಯ ‘ಗೋಪಿ ಬಹು’ ಧಾರಾವಾಹಿಯ ನಟಿ ದೆವೊಲೀನ ಭಟ್ಟಾಚಾರ್ಜಿಗೆ.

ಸಾಮಾನ್ಯವಾಗಿ ಕಿರುತೆರೆ ನಟಿಯರಿಗೆಲ್ಲಾ ಬೆಳ್ಳಿತೆರೆಯಲ್ಲಿ ನಟಿಸಬೇಕು ಎನ್ನುವುದು ಜೀವಮಾನದ ಆಸೆ. ಅದೇ ಥರದ ಆಸೆ ದೆವೊಲೀನಗೂ ಇತ್ತು. ಆದರೆ ಇಷ್ಟು ಬೇಗ ಆ ಆಸೆ ನೆರವೇರುತ್ತದೆ ಅನ್ನುವ ಕಲ್ಪನೆಯೂ ಇರಲಿಲ್ಲ. ಒನ್‌ ಫೈನ್ ಡೇ ಸುಮ್ಮನೆ ಯಾವುದೇ ತಯಾರಿ ಇಲ್ಲದೆಯೇ ಆಕಸ್ಮಿಕವಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾಳೆ ಆಕೆ. ಫೋಟೋಶೂಟ್ ಮಾಡಿಸಿದ ಮೇಲೆ ಸುಮ್ಮನಿರಲು ಕೈ ಬಿಡುತ್ತದೆಯೇ? ತಕ್ಷಣ ಸೋಷಲ್ ಮೀಡಿಯಾಗಳಲ್ಲಿ ಆ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಈ ಫೋಟೋಗಳು ಕಣ್ಣಿಗೆ ಬಿದ್ದಿದ್ದೇ ತಡ ಕೆಲವು ನಿರ್ದೇಶಕರು ತಕ್ಷಣ ಅಲರ್ಟ್ ಆಗಿದ್ದಾರೆ.

ಕೂಡಲೇ ಭಟ್ಟಾಚಾರ್ಜಿಗೆ ಆರ್ ನೀಡಲು ಮುಂದೆ ಬಂದಿದ್ದಾರೆ. ಫೋಟೋಗಳನ್ನು ಸಡನ್ ಆಗಿ ತೆಗೆಸಿಕೊಂಡಿದ್ದರೂ ಸಕತ್ ಆಗಿ ಕಾಣಿಸಿದ್ದೇ ಇದಕ್ಕೆ ಕಾರಣ. ಭಟ್ಟಾಚಾರ್ಜಿ ಮೈಮಾಟ, ಕಣ್ಣಂಚಿನ ಸೆಳೆತ ಇದರೊಂದಿಗೆ ಒಂದಷ್ಟು ಮಾದಕತೆ ಫೋಟೋಗಳಿಗೆ ಪ್ರಸಿದ್ಧಿ ತಂದುಕೊಟ್ಟಿವೆ. ಇದೆಲ್ಲವನ್ನೂ ಕಂಡು ುಲ್ ಖುಷ್ ಆಗಿರುವ ಭಟ್ಟಾಚಾರ್ಜಿ ಸೋಷಲ್ ಮೀಡಿಯಾಗಳಲ್ಲಿ ನೆಗೆಟಿವ್ ವಿಚಾರಗಳಿಗೇ ಹೆಚ್ಚು ಮಹತ್ವ ಸಿಗುತ್ತಿತ್ತು. ಆದರೆ ನನ್ನ ವಿಚಾರದಲ್ಲಿ ಇದು ಇಂದು ತಪ್ಪಾಗಿದೆ.

ಎಲ್ಲಾ ಕಡೆಯಿಂದಲೂ ನನಗೆ ಸಕಾರಾತ್ಮಕ ಸ್ಪಂದನೆಯೇ ಸಿಕ್ಕಿದೆ. ಇದರಿಂದ ನನ್ನ ಆತ್ಮಬಲ ನೂರ್ಮಡಿಗೊಂಡಿದೆ ಎಂದಿದ್ದಾಳೆ.