ಶೀತಲ್ ಶೆಟ್ಟಿ ಅಭಿನಯದ ಪತಿಬೇಕು.com ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ತಂಡ ವಿಭಿನ್ನ ರೀತಿಯಲ್ಲಿ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರ ಬರೆದಿದೆ.
ಬೆಂಗಳೂರು (ಆ. 29): ಶೀತಲ್ ಶೆಟ್ಟಿ ಅಭಿನಯದ ‘ಪತಿಬೇಕು ಡಾಟ್ ಕಾಮ್’ ಚಿತ್ರದ ನಿರ್ದೇಶಕ ರಾಕೇಶ್ ಅವರಿಗೆ ಭಿನ್ನವಾದೊಂದು ಆಸೆ ಇದೆ. ಚಿತ್ರದ ಆಡಿಯೋವನ್ನು ಭಿನ್ನ ರೀತಿಯಲ್ಲಿ ಸಿಎಂ ಕುಮಾರಸ್ವಾಮಿ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎಂದು.
ಅದು ಹೇಗಪ್ಪಾ, ಎಲ್ಲಪ್ಪಾ ಎಂದರೆ, ಕುಮಾರಸ್ವಾಮಿ ಅವರ ಜನತಾ ದರ್ಶನದ ವೇಳೆ. ಹೀಗೊಂದು ಆಸೆ ಹೊತ್ತಿರುವ ಚಿತ್ರತಂಡ ಈ ಕುರಿತು ಸಿಎಂಗೆ ಪತ್ರ ಬರೆದಿದೆ. ‘ನೀವು ಸಿನಿಮಾ ಕ್ಷೇತ್ರದವರೇ ಆಗಿರುವುದರಿಂದ ನಿಮ್ಮಿಂದ ನಮ್ಮ ಚಿತ್ರದ ಆಡಿಯೋ ಬಿಡುಗಡೆ ಮಾಡಿಸಬೇಕು ಎಂದುಕೊಂಡಿದ್ದೇವೆ. ಸಾಮಾನ್ಯ ಜನರ ಕತೆ ಹೊತ್ತಿರುವ ನಮ್ಮ ಚಿತ್ರದ ಆಡಿಯೋ ಸಾಮಾನ್ಯ ಜನರ ನಡುವಲ್ಲೇ ಬಿಡುಗಡೆಯಾಬೇಕು ಎಂಬುದು ನಮ್ಮ ಆಶಯ.
ಅದಕ್ಕಾಗಿ ನಿಮ್ಮ ಜನತಾ ದರ್ಶನದ ವೇಳೆ ನಾವೂ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ನಿಮ್ಮಿಂದ ಆಡಿಯೋ ಬಿಡುಗಡೆ ಮಾಡಿಸಬೇಕು ಎಂದು ಬಯಸಿದ್ದೇವೆ. ಇದಕ್ಕೆ ತಾವು ದಯಮಾಡಿ ಒಪ್ಪಿಗೆ ನೀಡಬೇಕು’ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ ನಿರ್ದೇಶಕ ರಾಕೇಶ್.
