‘ರಂಗಭೂಮಿಯಿಂದ ಸಿನಿಮಾಲೋಕಕ್ಕೆ ಬಂದ ನನಗೆ ಅದೃಷ್ಟವೇ ಎನ್ನುವ ಹಾಗೆ ಪ್ರತಿ ಸಿನಿಮಾಕ್ಕೂ ವಿಭಿನ್ನ ಪಾತ್ರಗಳೇ ಸಿಗುತ್ತವೆ. ಅಂಥದ್ದೇ ಒಂದು ಪಾತ್ರ ಈ ಚಿತ್ರದಲ್ಲೂ ಸಿಕ್ಕಿದೆ. ಇದೇ ಮೊದಲು ಪೊಲೀಸ್‌ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ಒಂದು ಮಧ್ಯಮ ವರ್ಗದಿಂದ ಬಂದ ಹುಡುಗಿ ಪೊಲೀಸ್‌ ಅಧಿಕಾರಿಯಾದರೆ, ಆ ವ್ಯವಸ್ಥೆಯಲ್ಲಿ ಏನೆಲ್ಲ ಸವಾಲು ಎದುರಿಸುತ್ತಾಳೆ, ಆಕೆ ಯಾಕಾಗಿ ಪೊಲೀಸ್‌ ಅಧಿಕಾರಿಯಾಗಿ ಬಂದಳು, ಆ ಮೂಲಕ ಆಕೆ ಅಲ್ಲಿ ಸಾಧಿಸಿ ತೋರಿಸಿದ್ದೇನೆ ಎನ್ನುವುದೇ ಎಸ್‌ಐ ಅನಿತಾ ಪಾತ್ರ’ ಎನ್ನುತ್ತಾ ಪಾತ್ರದ ವಿವರ ನೀಡುತ್ತಾರೆ ಪಲ್ಲವಿ ರಾಜು.

ಪಲ್ಲವಿ ರಾಜು ಈ ಪಾತ್ರಕ್ಕಾಗಿ ಹಲವು ಲೇಡಿ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಅಲ್ಲಿಂದ ಬಂದು ಅವರ ವರ್ತನೆ, ಮಾತು ಇತ್ಯಾದಿಗಳನ್ನು ಒಂದಷ್ಟುದಿನ ರಿಹರ್ಸಲ್‌ ಮಾಡಿ, ಆನಂತರವೇ ಚಿತ್ರೀಕರಣಕ್ಕೆ ಹೋಗಿದ್ದಾರೆ. ಚಿತ್ರದ ನಿರ್ದೇಶಕ ಮಧು ಚಂದ್ರ. ಚಿತ್ರಕ್ಕೆ ಹೊಸ ಪ್ರತಿಭೆ ಕಾರ್ತಿಕ್‌ ನಾಯಕ ಕಮ್‌ ನಿರ್ಮಾಪಕ. ಅವರೊಂದಿಗೆ ಐಶ್ವರ್ಯ ರಾವ್‌ ಕೂಡ ಚಿತ್ರದ ಮತ್ತೋರ್ವ ನಾಯಕಿ.