ಕಿರು ತೆರೆ ಮೇಲೆ ಮತ್ತೆ ಪಾಪ ಪಾಂಡು

Paapa Pandu to be back on small screen
Highlights

ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಪಾಪ ಪಾಂಡು ಧಾರಾವಾಹಿ 1014 ಕಂತುಗಳನ್ನು ಪೂರೈಸಿ, ಕನ್ನಡ ಕಿರುತೆರೆ ಪ್ರೇಕ್ಷಕರ ಮುಖದಲ್ಲಿ ನಗು ಇರುವಂತೆ ನೋಡಿಕೊಂಡಿತ್ತು. ಸಿಹಿ ಕಹಿ ಚಂದ್ರು ನಿರ್ದೇಶನದ ಈ ಧಾರಾವಾಹಿಯಲ್ಲಿ ಪಾಂಡು ಹಾಗೂ ಆತನ ಮೇಲೆ ದರ್ಪ ತೋರುವ ಆತನ ಪತ್ನಿ ಪಾಚು ಶ್ರೀಮತಿ ಹಾಸ್ಯಭರಿತ ಸಂಭಾಷಣೆ ಮೂಲಕವೇ ಎಲ್ಲರನ್ನೂ ಮೋಡಿ ಮಾಡಿದ್ದರು.

ಬೆಂಗಳೂರು: ನಗೆಯ ಕ್ರಾಂತಿಗೆ ಕಾರಣವಾದ  'ಪಾಪ ಪಾಂಡು' ಮತ್ತೆ ವೀಕ್ಷಕರನ್ನು ರಂಜಿಸಲು ಬರಲಿದೆ. ಅರ್ಧ ಗಂಟೆ ಮನಸಾರೆ ನಗಲು ಇನ್ನು ಅಡ್ಡಿಯಿಲ್ಲ.

ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಪಾಪ ಪಾಂಡು ಧಾರಾವಾಹಿ 1014 ಕಂತುಗಳನ್ನು ಪೂರೈಸಿ, ಕನ್ನಡ ಕಿರುತೆರೆ ಪ್ರೇಕ್ಷಕರ ಮುಖದಲ್ಲಿ ನಗು ಇರುವಂತೆ ನೋಡಿಕೊಂಡಿತ್ತು. ಸಿಹಿ ಕಹಿ ಚಂದ್ರು ನಿರ್ದೇಶನದ ಈ ಧಾರಾವಾಹಿಯಲ್ಲಿ ಪಾಂಡು ಹಾಗೂ ಆತನ ಮೇಲೆ ದರ್ಪ ತೋರುವ ಆತನ ಪತ್ನಿ ಪಾಚು ಶ್ರೀಮತಿ ಹಾಸ್ಯಭರಿತ ಸಂಭಾಷಣೆ ಮೂಲಕವೇ ಎಲ್ಲರನ್ನೂ ಮೋಡಿ ಮಾಡಿದ್ದರು. ಅಲ್ಲದೇ ವಿಕ್ರಂ ಸೂರಿ, ನಮಿತಾ ಜತೆ ಶಾಲಿನಿಯೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಮತ್ತೆ ಈ ಧಾರಾವಾಹಿಯ ಎರಡನೇ ಭಾಗವನ್ನು ನಿರ್ದೇಶಿಸಲು ಸಿಹಿ ಕಹಿ ಚಂದ್ರು ಸಿದ್ಧರಾಗುತ್ತಿದ್ದು, ಸಂಭಾಷಣೆ ತಯಾರಾಗುತ್ತಿದೆ ಎನ್ನಲಾಗಿದೆ. ಈ ಬಾರಿಯೂ ಶಾಲಿನಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಪಾಂಡುವಾಗಿ ರಂಜಿಸಿದ ಚಿದಾನಂದ ಸಹ ಕಾಣಿಸಿಕೊಳ್ಳಲ್ಲಿದ್ದಾರೆ.
 

loader