ಹಾಡುವವರಿಗೊಂದು ಸದವಕಾಶ | ನಿಮಗಿದೋ ವೇದಿಕೆ ಕಲ್ಪಿಸಲಿದೆ  ಸರಿಗಮಪ | ಬನ್ನಿ ಭಾಗವಹಿಸಿ ನಿಮ್ಮ ಪ್ರತಿಭೆ ಅನಾವರಣಗೊಳಿಸಿ 

ಬೆಂಗಳೂರು (ಜ. 16): ವೇದಿಕೆ ಮೇಲೆ ಹಾಡುವ ಆಸೆ ನಿಮಗಿದೆಯಾ? ಹಾಗಾದ್ರೆ ನಿಮಗಿದೋ ಸದವಕಾಶ. ಜನಪ್ರಿಯ ಮನರಂಜನಾ ವಾಹಿನಿ ಜೀ ಕನ್ನಡ ನಿಮಗೆ ಇಂತದ್ದೊಂದು ಅವಕಾಶವನ್ನು ನೀಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ಬಗ್ಗೆ ಗೊತ್ತೇ ಇದೆ. ಅನೇಕ ಅದ್ಭುತ ಗಾಯನಾ ಪ್ರತಿಭೆಗಳನ್ನು ಕೊಟ್ಟ ಜನಪ್ರಿಯ ರಿಯಾಲಿಟಿ ಶೋ. ಈ ಶೋನಲ್ಲಿ ಒಮ್ಮೆಯಾದರೂ ನಾನು ಹಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಸಂಗೀತ ಪ್ರೇಮಿಗೂ ಇರುತ್ತದೆ. ಅಂತವರಿಗಾಗಿ ಒಂದು ಅವಕಾಶ ಒದಗಿ ಬಂದಿದೆ. 

ಸರಿಗಮಪ ರಿಯಾಲಿಟಿ ಶೋಗೆ ಮಹಾ ಅಡಿಷನ್ ಶುರುವಾಗಿದೆ. ಮರಿ ಕೋಗಿಲೆಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಒಂದು ವೇದಿಕೆ ಕಲ್ಪಿಸಿಕೊಡಲಿದೆ ಸರಿಗಮಪ ವೇದಿಕೆ. 30 ಜಿಲ್ಲೆಗಳ ಮಹಾ ಆಡಿಶನ್ ಶುರುವಾಗಿದೆ. 

ಇದೇ ಶನಿವಾರದಿಂದ ಸರಿಗಮಪ ಆಡಿಷನ್ ನಿಮ್ಮೂರಿನ ಕಡೆ ಪಯಣ ಬೆಳಸಲಿದೆ. ಇದೇ ಶನಿವಾರ ಅಂದರೆ ಶನಿವಾರ ಜ. 19 ರಂದು ಚಿಕ್ಕಮಗಳೂರಿನಲ್ಲಿ ಮಹಾ ಆಡಿಷನ್ ನಡೆಯಲಿದೆ. ಬನ್ನಿ ಭಾಗವಹಿಸಿ ನಿಮ್ಮ ಪ್ರತಿಭೆ ತೋರಿಸಿ.