Asianet Suvarna News Asianet Suvarna News

ಬಾಲಿವುಡ್ ಸ್ಟಾರ್'ಗಳ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು : ಮೋದಿಯ ನೋಟ್ ಬ್ಯಾನ್ ಯಾರಿಗೆ ತಟ್ಟಿತು

ವಿಶ್ವದ ಶ್ರೀಮಂತ ಸ್ಟಾರ್ ನಟರ ಸಾಲಿನಲ್ಲಿ ಈಗ ಬಾಲಿವುಡ್ ನಾಲ್ಕು ಜನ ಸೂಪರ್ ಸ್ಟಾರ್ ಗಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

Note Ban Effect and B town star bank balance

ಮೋದಿಯ ನೋಟ್ ಬ್ಯಾನ್ ಬಿಸಿ ಸಾಮಾನ್ಯರಿಗೆ  ದಿನನಿತ್ಯದ ಜೀವನಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾದರೆ  ಕಪ್ಪು ಹಣ, ತೆರಿಗೆ ವಂಚಕರಿಗೆ ಭಾರಿ ಹೊಡೆತ ಬಿದ್ದಿದೆ. ಇದರಲ್ಲಿ  ಸಿನಿಮಾ ಮಂದಿಯೇನು ಕಡಿಮೆಯೇನಲ್ಲ. ಬಿಟೌನ್ ನಲ್ಲಿ  ಸಲ್ಮಾನ್ ಖಾನ್, ಅಮೀರ್ ಖಾನ್ . ಶಾರೂಖ್ ಖಾನ್ ಏನು ಮಾಡಿದ್ರು ದೊಡ್ಡ ಸುದ್ದಿಯಾಗುತ್ತೆ. ಸದ್ಯಕ್ಕೆ  ಮೂರು ಜನ ಖಾನ್ ಗಳ ಜೊತೆಗೆ ಅಕ್ಕಿ ಕೂಡ ಸುದ್ದಿಯಲ್ಲಿದ್ದಾರೆ. ನೋಟ್ ಬ್ಯಾನ್ ಬಿಸಿ ಯಾವ ಸ್ಟಾರ್'ಗೆ ತಟ್ಟಿದೆ ಎಂಬುದಕ್ಕಿಂತ ಮೊದಲು ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ವಿಶ್ವದ ಶ್ರೀಮಂತ ಸ್ಟಾರ್ ನಟರ ಸಾಲಿನಲ್ಲಿ ಈಗ ಬಾಲಿವುಡ್ ನ ನಾಲ್ಕು ಜನ ಸೂಪರ್ ಸ್ಟಾರ್ ಗಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕೋಟಿ ಕೋಟಿ ಆಸ್ತಿಗಳಿಗೆ ಒಡೆಯರಾಗಿರೋ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರ ಬ್ಯಾಂಕ್ ಬ್ಯಾಲೆನ್ಸ್ ಕೇಳಿದ್ರೆ ನೀವು ಸ್ವಲ್ಪ ಮಟ್ಟಿಗೆ ಚಕಿತರಾಗ್ತೀರಾ.

ಬಾಲಿವುಡ್ ನ ಕಿಂಗ್ ಕಾನ್ ಆಗಿ ಮೆರೆಯುತ್ತಿರುವ ಶಾರೂಖ್ ಖಾನ್ ಆಸ್ತಿ ಅಲ್ಲದೇ ಕೋಟಿ ಕೋಟಿ ಬ್ಯಾಂಕ್ ಬ್ಯಾಲೆನ್ಸ್  ಹೊಂದಿದ್ದಾರೆ. ಶಾರುಖ್ ಖಾನ್ ಬ್ಯಾಂಕ್ ನಲ್ಲಿ ಬರೋಬ್ಬರಿ 65 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ. ಈ ಮೂಲಕ  ಪ್ರಪಂಚದ ಶ್ರೀಮಂತ ಸ್ಟಾರ್ ನಟರ ಸಾಲಿನಲ್ಲಿ ಬಾಲಿವುಡ್ ನಿಂದ ಮೊದಲ ಸ್ಥಾನದಲಿದ್ದಾರೆ ಶಾರುಖ್ .

 ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರೋ ಸಲ್ಮಾನ್ ಖಾನ್ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಏನು ಕಡಿಮೆ ಇಲ್ಲಾ.  ಒಂದು ಸಿನಿಮಾಕ್ಕೆ 60ರಿಂದ 70 ಕೋಟಿ ಸಂಭಾವನೆ ಪಡೆಯುವ ಸಲ್ಮಾನ್ ಖಾನ್ ಬರೋಬ್ಬರಿ 23 ಕೋಟಿ ರೂಪಾಯಿಗಳಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ. ಪ್ರಪಂಚದ ಶ್ರೀಮಂತ ಸ್ಟಾರ್ ನಟರ ಸಾಲಿನಲ್ಲಿ ಸಲ್ಮಾನ್ ಖಾನ್ ಎರಡನೇ ಸ್ಥಾನದಲಿದ್ದಾರೆ...

ಅಮಿರ್ ಖಾನ್ ಅಕೌಂಟ್ ನಲ್ಲಿರುತ್ತೆ 18 ಕೋಟಿ

ಬಾಲಿವುಡ್ ನ ಮೂರು ಖಾನ್ ಗಳಲ್ಲಿ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನಾ ಇಬ್ಬರು ಖಾನ್ ಗಳಿಗಿಂತ ಸ್ವಲ್ಪ ಕಮ್ಮಿನೆ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ.ಸದ್ಯ ದಂಗಲ್ ಚಿತ್ರದ ಜಪ ಮಾಡ್ತಿರೋ ಅಮಿರ್ ಖಾನ್ 18 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟುಕೊಂಡಿದ್ದಾರೆ.

ಖಾನ್ ಗಳ ಸಾಲಿನಲ್ಲಿ ಅಕ್ಷಯ್ ಕುಮಾರ್

ಇನ್ನು ಬಿಟೌನ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೂಡ ತಮ್ಮ ಬ್ಯಾಂಕ್ ಖಾತೆಯಲ್ಲಿ ಕೋಟಿ ಕೋಟಿ ಹಣ ಇಟ್ಟಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಬ್ಯಾಂಕ್ ಅಕೌಂಟ್ ನಲ್ಲಿ 17 ಕೋಟಿ ರೂ. ಇಟ್ಟಿದ್ದಾರೆ.

ದೇಶದಲ್ಲೇ ಪ್ರಧಾನ ಮಂತ್ರಿ ನರೆಂದ್ರ ಮೋದಿ ಕಾಳಧನಿಕರನ್ನು ಮಟ್ಟ ಹಾಕುವ ಪಣ ತೊಟ್ಟಿರುವ ಬೆನ್ನಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಗಳ ಬ್ಯಾಂಕ್ ಬ್ಯಾಲೆನ್ಸ್ ಬಹಿರಂಗವಾಗಿರೋದು ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ಈ ಸ್ಟಾರ್ ನಟರ ಬ್ಯಾಂಕ್ ಬ್ಯಾಲೆನ್ಸ್ ಕೋಟಿ ಕೋಟಿ ರೂಪಾಯಿ ಇರಬೇಕಾದ್ರೆ ಒಟ್ಟು ಆಸ್ತಿ ಎಷ್ಟು ಇರಬೇಕು ಅನ್ನೋದನ್ನ ನೀವೆ ಊಹಿಸಿಕೊಳ್ಳಿ.

ಎಲ್ಲ ನಟರು ತಾವು ನೋಟ್ ಬ್ಯಾನ್ ಪರ  ಎಂದು ಹೇಳಿದರೂ  ಗಳಿಕೆಯಲ್ಲಿರುವ ಪ್ರತಿಯೊಬ್ಬ ನಟರಿಗೂ ಈ ಬಿಸಿ ತಟ್ಟಿದೆ.  ಬಹಿರಂಗವಾಗಿ ಹೇಳಿಕೆ ಕೊಡದಿದ್ದರೂ ಅಂತರಂಗದಲ್ಲಿ  ತೆರಿಗೆ ಕಟ್ಟದ ಹಣ ತಮ್ಮ  ಬಳಿಯೂ ಇದೆಯೆಂದು ಪರಿತಪಿಸುತ್ತದ್ದಾರಂತೆ.

Follow Us:
Download App:
  • android
  • ios