ಬೆಂಗ​ಳೂ​ರು (ಅ. 15): ಅಕ್ಟೋಬರ್‌ 16ರಿಂದ ಚಿತ್ರಮಂದಿರಗಳು ಆರಂಭಗೊಳ್ಳುತ್ತಿವೆ ಎಂಬ ಸುದ್ದಿಯಿಂದ ನಿಜಕ್ಕೂ ಸಂತೋಷಪಟ್ಟವರು ಯಾರು? ದೊಡ್ಡ ಸಿನಿಮಾಗಳ ನಿರ್ಮಾಪಕರಂತೂ ಅಲ್ಲ ಅನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ಅಕ್ಟೋಬರ್‌ 16ರಿಂದ ಯಾವ ದೊಡ್ಡ ಬಜೆಟ್ಟಿನ ಸಿನಿಮಾಗಳೂ ರಿಲೀಸ್‌ ಆಗುತ್ತಿಲ್ಲ. ಮೊದಲು ಜನ ಬರಲಿ, ಆಮೇಲೆ ನೋಡೋಣ ಎಂಬ ಕಾದುನೋಡುವ ತಂತ್ರವನ್ನು ದೊಡ್ಡ ಸಿನಿಮಾಗಳ ನಿರ್ಮಾಪಕರು ಅನುಸರಿಸುತ್ತಿದ್ದಾರೆ.

ಆದರೆ, ಚಿತ್ರಮಂದಿರಗಳನ್ನು ಬರಗಾಲದಲ್ಲೂ ಕಾಪಾಡುತ್ತಾ ಬಂದಿರುವ ಸದಭಿರುಚಿಯ ಮತ್ತು ಮಧ್ಯಮ ಬಜೆಟ್ಟಿನ ಸಿನಿಮಾಗಳ ನಿರ್ಮಾಪಕರು ಕೂಡ ಒಂದು ವಾರ ಕಾಯುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಅಕ್ಟೋಬರ್‌ 23ರಂದು ಒಂದೇ ಒಂದು ಹೊಸ ಚಿತ್ರ ಮಾತ್ರ ಬಿಡುಗಡೆ ಆಗುತ್ತಿದೆ. ಮಿಕ್ಕಂತೆ ಎಲ್ಲರೂ ಮರುಬಿಡುಗಡೆಯ ಜೂಜಿಗೆ ಸಿದ್ಧರಾಗಿದ್ದಾರೆ.

'ಬ್ರಹ್ಮಗಂಟು' ಲಕ್ಕಿ 'ಬಿಗ್‌ಬಾಸ್' ಸಂಜನಾ ಗುಡ್‌ ನ್ಯೂಸ್; ಈ ಫೋಟೋ ವೈರಲ್?

ಅಕ್ಟೋಬರ್‌ 16ರಂದು ತೆರೆಕಾಣಲಿರುವ ಸಿನಿಮಾಗಳ ಪಟ್ಟಿಇದು. ಇವಿಷ್ಟೂರೀರಿಲೀಸ್‌ ಆಗುತ್ತಿರುವ ಚಿತ್ರಗಳೇ:

1. ವಿಕಾಸ್‌ ನಟನೆಯ ‘ಕಾಣದಂತೆ ಮಾಯವಾದನು’

2. ಚಿರಂಜೀವಿ ಸರ್ಜಾ ನಟನೆಯ ‘ಶಿವಾರ್ಜುನ’

3. ರಮೇಶ್‌ ಅರವಿಂದ್‌ ಅಭಿನಯದ ‘ಶಿವಾಜಿ ಸುರತ್ಕಲ್‌’

4. ಡಾರ್ಲಿಂಗ್‌ ಕೃಷ್ಣ ನಿರ್ದೇಶಿಸಿ- ನಟಿಸಿರುವ ‘ಲವ್‌ ಮಾಕ್ಟೇಲ್‌’

5. ಹೊಸಬರ ‘5 ಅಡಿ 7 ಅಂಗುಲ’

6. ‘3ನೇ ಕ್ಲಾಸ್‌’

7. ಪುನೀತ್‌ ರಾಜ್‌ಕುಮಾರ್‌ ಪಿಆರ್‌ಕೆ ನಿರ್ಮಾಣದ ಮಾಯಾಬಜಾರ್‌

ಅ.23ರಂದು ಮತ್ತಷ್ಟುಸಿನಿಮಾಗಳು ರೀರಿಲೀಸ್‌ ಆಗಲಿವೆ. ಒಂದೇ ಒಂದು ಹೊಸ ಸಿನಿಮಾ ತೆರೆಗೆ ಬರುತ್ತಿದೆ.

1. ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಜಂಟಲ್‌ಮನ್‌’

2. ಅಶೋಕ್‌ ನಿರ್ದೇಶನದ ‘ದಿಯಾ’

3. ನೀತೂ ನಟನೆಯ ‘ವಜ್ರಮುಖಿ’

4.ಚಿರಂಜೀವಿ ಸರ್ಜಾ ಹಾಗೂ ಚೇತನ್‌ ನಟನೆಯ ‘ರಣಂ’ (ಹೊಸ ಸಿನಿಮಾ)

ನಮ್ಮ ‘ಶಿವಾರ್ಜುನ’ ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಲಾಕ್‌ಡೌನ್‌ ಆಯ್ತು. ಹೀಗಾಗಿ ಚಿತ್ರವನ್ನು ಎಲ್ಲಾ ಪ್ರೇಕ್ಷಕರು ನೋಡಲಿಲ್ಲ. ಚಿರಂಜೀವಿ ಸರ್ಜಾ ಅವರ ನಟನೆಯ ಸಿನಿಮಾ ಎಲ್ಲರು ನೋಡಬೇಕು ಎನ್ನುವ ಕಾರಣಕ್ಕೆ ಮತ್ತೆ ಬಿಡುಗಡೆ ಮಾಡುತ್ತಿದ್ದೇವೆ. ಸುಮಾರು 100 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

-ಶಿವಾರ್ಜುನ, ನಿರ್ಮಾಪಕ