ಜಯಲಲಿತಾ ಪಾತ್ರದಲ್ಲಿ ನಿತ್ಯಾಮೆನನ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 6, Dec 2018, 9:01 AM IST
Nithya menon play j jayalalitha biopic The Iron Lady
Highlights

ಸ್ವಲ್ಪ ದಿನ ಸೈಲೆಂಟಾಗಿದ್ದ ನಿತ್ಯಾ ಮೆನನ್ ಇದೀಗ ಭರ್ಜರಿಯಾಗಿ ವಾಪಸ್ ಬಂದಿದ್ದಾರೆ. ಭಾರತದ ಮಾರ್ಗರೆಟ್ ಥ್ಯಾಚರ್ ಎನ್ನಿಸಿಕೊಂಡಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ನಲ್ಲಿ ನಿತ್ಯಾ ಮೆನನ್ ಜಯಲಲಿತಾ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಹೆಸರು ‘ದಿ ಐರನ್ ಲೇಡಿ’.

 

ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಹೊರಟಿರುವ ‘ದಿ ಐರನ್ ಲೇಡಿ’ ಸಿನಿಮಾದ ಫಸ್ಟ್ ಲುಕ್ ಜಯಲಲಿತಾ ಅವರ ಪುಣ್ಯತಿಥಿ ದಿವಸ ಅಂದರೆ ಡಿ.5ಕ್ಕೆ ಬಿಡುಗಡೆಯಾಗಿದೆ. ನಿರ್ದೇಶಕ ಮಿಸ್ಕಿನ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ದುಡಿದಿದ್ದ ಪ್ರಿಯದರ್ಶಿನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ತೂಕದ ಮಹಿಳೆಯಾದ ನಿತ್ಯಾ:

ನಿತ್ಯಾ ಮೆನನ್ ಜಯಲಲಿತಾ ಪಾತ್ರಕ್ಕೆ ಯಾವ ಪರಿ ಸಿದ್ಧತೆ ಮಾಡಿಕೊಂಡಿರಬಹುದು ಅನ್ನೋದು ಈ ಸಿನಿಮಾದ ಪೋಸ್ಟರ್ ನೋಡಿದರೆ ಗೊತ್ತಾಗುತ್ತೆ. ಆರಂಭದಲ್ಲಿ ಜನಪ್ರಿಯ ಚಿತ್ರನಟಿಯಾಗಿದ್ದ ಜಯಲಲಿತಾ ಬಳಿಕ ರಾಜಕಾರಣಕ್ಕಿಳಿದು ಅಲ್ಲಿ ಸಂಚಲನ ಮೂಡಿಸಿದ ಬಗೆಯನ್ನು ಈ ಚಿತ್ರ ಪ್ರತಿಫಲಿಸಲಿದೆ. ಚಿತ್ರನಟಿ ಹಾಗೂ ರಾಜಕಾರಣಿ ಪಾತ್ರಗಳೆರಡನ್ನೂ ನಿತ್ಯಾ ನಿಭಾಯಿಸಬೇಕಿರುವುದರಿಂದ ಹೆಚ್ಚಿನ ಡೆಡಿಕೇಶನ್ ಅನಿವಾರ್ಯ. ನಿತ್ಯಾ ಅದನ್ನು ಸಮರ್ಪಕವಾಗಿಯೇ ನಿರ್ವಹಿಸಿದಂತಿದೆ. ದೊಡ್ಡ ಬೊಟ್ಟಿಟ್ಟುಕೊಂಡ, ದಪ್ಪನೆಯ ಹೆಣ್ಣುಮಗಳ ಲುಕ್‌ನಲ್ಲಿ ನಿತ್ಯಾ ಥೇಟ್ ಜಯಲಲಿತಾರಂತೆ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ದಿನಗಟ್ಟಲೆ ಜಯಲಲಿತಾ ಅವರ ಹಾವ ಭಾವಗಳನ್ನು ಅಭ್ಯಸಿಸಿರೋ ನಿತ್ಯಾ ಜಯಲಲಿತಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ತೂಕವೂ ಹೆಚ್ಚಾಗಿ, ಅವರು ತೂಕದ ಮಹಿಳೆಯಾಗಿ ಕಾಣಿಸಿಕೊಂಡಿರುವುದು ಪೋಸ್ಟರ್‌ನಲ್ಲಿ ಸ್ಪಷ್ಟವಾಗಿದೆ.

ಈ ಸಿನಿಮಾ ಜಯಲಲಿತಾ ಜನ್ಮದಿನ ಫೆಬ್ರವರಿ 24ಕ್ಕೆ ತೆರೆಕಾಣಲಿದೆ. ಸಿನಿಮಾ ಕುರಿತು ಮಾಹಿತಿ ನೀಡಿರುವ ನಿರ್ದೇಶಕಿ ಪ್ರಿಯದರ್ಶಿನಿ, ‘ಜಯಲಲಿತಾ ಅವರ ಎಳವೆಯಿಂದ ಅವರು ಕೊನೆಯುಸಿರೆಳೆಯುವವರೆಗಿನ ವಿವರಗಳು ಸಿನಿಮಾದಲ್ಲಿರುತ್ತದೆ. ಜಯಲಲಿತಾ ಪಾತ್ರಕ್ಕಾಗಿ ಬಹಳ ಮಂದಿ ನಟಿಯರನ್ನು ಸಂಪರ್ಕಿಸಿದ್ದೆ. ಹೆಚ್ಚಿನವರು ಹಿಂದೇಟು ಹಾಕಿದರು. ನಿತ್ಯಾ ಮಾತ್ರ ಖುಷಿಯಿಂದ ಪಾತ್ರ ಮಾಡಲು ಒಪ್ಪಿ, ಬಹಳ ಬೋಲ್ಡ್ ಆಗಿ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ’ ಎಂದಿದ್ದಾರೆ.

 ನಿತ್ಯಾ ಬಾಲಿವುಡ್‌ನಲ್ಲಿ ಅಕ್ಷಯ್‌ಕುಮಾರ್ ಜೊತೆಗೆ ‘ಮಿಷನ್ ಮಂಗಲ್’ನಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ತೆಲುಗಿನ ಬಹುನಿರೀಕ್ಷೆಯ ಚಿತ್ರ ‘ಎನ್‌ಟಿಆರ್ ಕಥಾ ನಾಯಕುಡು’ ಸಿನಿಮಾದಲ್ಲಿ ಸಾವಿತ್ರಿ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಇದಲ್ಲದೇ ನಾಲ್ಕು ಮಲಯಾಳಂ, ಒಂದು ತಮಿಳು ಸಿನಿಮಾವೂ ಕೈಯಲ್ಲಿದೆ. 2019 ನಿತ್ಯಾ ಪಾಲಿಗೆ ಭರವಸೆಯ ವರ್ಷವಾಗುವ ಎಲ್ಲ ಸಾಧ್ಯತೆಗಳಿವೆ. 

loader