ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ನಿಖಿತಾ ಅವರನ್ನು ನೋಡಿದ ಗಗನ್ ದೀಪ್ ಸಿಂಗ್ ಅವರು ಒಂದೇ ನೋಟಕ್ಕೆ ಮೆಚ್ಚಿಕೊಂಡಿದ್ದರು.
ಮುಂಬೈ(ಅ.9): ಕನ್ನಡ ಹಾಗು ತೆಲುಗು ಚಿತ್ರಗಳಲ್ಲಿ ತನ್ನ ಗ್ಲ್ಯಾಮರ್ ನಿಂದಲೇ ಬೋಲ್ಡ್ ಮಾಡಿದ ನಟಿ ನಿಖಿತಾ ತುಕ್ರಾಲ್ ಉದ್ಯಮಿ ಗಗನ್‍ದೀಪ್ ಸಿಂಗ್ ಮಾವೋ ಜೊತೆ ಸಪ್ತಪದಿ ತುಳಿದಿದ್ದಾರೆ. ನಿನ್ನೆ ಬೆಳಗ್ಗೆ ಶುಭ ಮುಹೂರ್ತದಲ್ಲಿ ನಟಿ ನಿಖಿತಾ ತುಕ್ರಾಲ್ ಅವರು, ಎರಡು ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ತಾವು ಪ್ರೇಮಿಸಿದ ಪಂಜಾಬಿ ಹುಡುಗ ಗಗನ್ ದೀಪ್ ಸಿಂಗ್ ಮಾಗೋ ಅವರ ಕೈ ಹಿಡಿದಿದ್ದಾರೆ.
ಈ ಸಮಾರಂಭ ಮುಂಬೈನಲ್ಲಿ ನಡೆದಿದ್ದು, ಇಂದು ಮುಂಬೈನಲ್ಲೇ ಆರತಕ್ಷತೆ ನಡೆಯಲಿದೆ. ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ನಿಖಿತಾ ಅವರನ್ನು ನೋಡಿದ ಗಗನ್ ದೀಪ್ ಸಿಂಗ್ ಅವರು ಒಂದೇ ನೋಟಕ್ಕೆ ಮೆಚ್ಚಿಕೊಂಡಿದ್ದರು. ಆಮೇಲೆ ಮಾತುಕತೆ ಆಗಿ ಲವ್ ಆಗಿ ಇದೀಗ ಮದುವೆ ಕೂಡ ಮಾಡಿಕೊಂಡಿದ್ದಾರೆ. ಪಕ್ಕಾ ಪಂಜಾಬಿ ಶೈಲಿ ಅಂದರೆ ಉತ್ತರ ಭಾರತೀಯ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ನೆರವೇರಿದೆ. ಮುಂಬೈನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
