ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಅದ್ಧೂರಿ ಮದುವೆಯ ಒಂದು ಅತ್ಯಂತ ಸುಂದರ ಹಾಗೂ ಭಾವನಾತ್ಮಕ ಕ್ಷಣದ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಿಕ್ ಅತ್ಯಂತ ಭಾವನಾತ್ಮಕರಾಗಿರುವುದು ಸ್ಪಷ್ಟವಾಗಿದೆ. ಮದುವೆ ವಸ್ತ್ರಗಳನ್ನು ಧರಿಸಿ, ಕೈಯಲ್ಲಿ ಹೂವಿನ ಗುಚ್ಛ ಹಿಡಿದು ತನ್ನ ಅಮ್ಮನೊಂದಿಗೆ ತನ್ನೆಡೆಗೆ ಬರುತ್ತಿರುವುದನ್ನು ಕಂಡು ನಿಕ್ ಹೃದಯ ತುಂಬಿ ಬಂದಿದೆ ಹಾಗೂ ಇದೇ ಖುಷಿ ಆನಂದಬಾಷ್ಪವಾಗಿ ಕಣ್ಣಿನಿಂದ ಹೊರ ಸೂಸಿದೆ.

ನಿಕ್ ಆಕ್ಷಣಕ್ಕಾಗಿ ಅದೆಷ್ಟು ಸಮಯದಿಂದ ಕಾಯುತ್ತಿದ್ದರು ಎಂಬುವುದಕ್ಕೆ ಅವರು ಹರಿಸಿದ ಕಂಬನಿಯೇ ಸಾಕ್ಷಿ. ಪ್ರಿಯಾಂಕಾರೊಂದಿಗಿನ ಭಾಂದವ್ಯ ಹಾಗೂ ಅವರಿಬ್ಬರ ನಡುವಿನ ಹೊಂದಾಣಿಕೆ ವಿವಾಹದ ಫೋಟೋಗಳಲ್ಲಿ ಸ್ಪಷ್ಟವಾಗಿ ಗಮನಕ್ಕೆ ಬಂದಿದೆ. ಭಾರತಕ್ಕೆ ಬಂದು ಇಲ್ಲಿ ಹಿಂದೂ ಸಂಪ್ರದಾಯದಂತೆ ನಡೆದ ಮದುವೆಯ ಸಂಪ್ರದಾಯಗಳನ್ನು ಆಸಕ್ತಿಯಿಂದ ಪಾಲಿಸುತ್ತಿರುವುದೂ ಕಂಡು ಬಂದಿದೆ. ಕ್ರೈಸ್ತ ಸಂಪ್ರದಾಯದಂತೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಅವರು ಕಪ್ಪು ಬಣ್ಣದ ಸೂಟ್ ಧರಿಸಿದ್ದರೆ, ಹಿಂದೂ ಸಂಪ್ರದಾಯದಂತೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಶೇರ್ವಾನಿ ಧರಿಸಿದ್ದರು.

 
 
 
 
 
 
 
 
 
 
 
 
 

Once upon a fairytale... @nickjonas Link in bio @people

A post shared by Priyanka Chopra (@priyankachopra) on Dec 4, 2018 at 7:12am PST

ಮದುವೆಯ ಬಳಿಕ ತೆಗೆದ ಫೋಟೋಗಳಲ್ಲಿ ಮಾಮೂಲಿ ಬಟ್ಟೆ ಧರಿಸಿ ಕಂಡು ಬಂದರು. ಇನ್ನು ರಿಸೆಪ್ಶನ್‌ನಲ್ಲಿ ಧರಿಸಿದ್ದ ಬ್ಲೇಸರ್ ಕೂಡಾ ಆಕರ್ಷಣೀಯವಾಗಿತ್ತು. ಮಂಗಳವಾರದಂದು ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡಾ ಭಾಗವಹಿಸಿ ವಧು ವರರಿಗೆ ಶುಭ ಕೋರಿದ್ದು ಭಾರೀ ಸುದ್ದಿಯಾಗಿತ್ತು.