ಮುಂಬೈ (ನ. 14): ಬಾಲಿವುಡ್ ನಲ್ಲಿ ಮದುವೆ ಸೀಸನ್ ಶುರುವಾಗಿದೆ. ಅತ್ತ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ನಡೆಯುತ್ತಿದ್ದರೆ ಇತ್ತ ಪ್ರಿಯಾಂಕ ಚೋಪ್ರಾ, ನಿಕ್ ಜೋನ್ಸ್ ಮದುವೆ ತಯಾರಿ ನಡೆಯುತ್ತಿದೆ. 

ಪಿಗ್ಗಿ- ನಿಕ್ ಜೋನ್ಸ್ ಡಿಸಂಬರ್ ನಲ್ಲಿ ಮದುವೆಯಾಗಲಿದ್ದಾರೆ. ನಿಕ್ ಹಾಗೂ ಪಿಗ್ಗಿ ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿ ಮದುವೆಗೆ ಸಜ್ಜಾಗಿದ್ದಾರೆ. 

ಬ್ಯಾಚುಲರ್ ಪಾರ್ಟಿಯಲ್ಲಿ ನಿಕ್ ಜೋನ್ಸ್ ಮಸ್ತ್ ಮಜಾ!

ಡಿಸಂಬರ್ 2 ರಂದು ರಾಜಸ್ತಾನದ ಜೋಧಪುರದಲ್ಲಿ ಮದುವೆಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇವರ ಮದುವೆ ಫೋಟೋ ಬಗ್ಗೆ ಈಗಾಗಲೇ ಮಾತುಗಳು ಶುರುವಾಗಿದ್ದು 18 ಕೋಟಿಗೆ ಮಾರಾಟವಾಗುವ ನಿರೀಕ್ಷೆಯಿದೆ. 

ಪ್ರಿಯಾಂಕ ಚೋಪ್ರಾ ಮಾತು ಕೇಳಿ ಪರಿಣೀತಿ ಎಮೋಶನಲ್ ಆಗಿದ್ಯಾಕೆ?

3 ದಿನಗಳ ಕಾಲ ಮದುವೆ ಸಮಾರಂಭ ನಡೆಯಲಿದ್ದು ನವೆಂಬರ್ 30 ರಿಂದಲೇ ಶುರುವಾಗಲಿದೆ. 1500-2000 ಜನ ಬರುವ ನಿರೀಕ್ಷೆಯಿದೆ. ಬಾಲಿವುಡ್ ತಾರೆಯರೆಲ್ಲಾ ಆಗಮಿಸಲಿದ್ದಾರೆ. ಸಂಗೀತ್ ಕಾರ್ಯಕ್ರಮಕ್ಕೆ ತಯಾರಿಗಳು ನಡೆಯಲಿದ್ದು ನಿಕ್ ಜೋನ್ಸ್ ಸಂಗಾತಿಗಾಗಿ ಲವ್ ಸಾಂಗ್ ಹೇಳಲಿದ್ದಾರೆ ಎನ್ನಲಾಗಿದೆ.