Asianet Suvarna News Asianet Suvarna News

ಪ್ರಿಯಾಂಕ ಚೋಪ್ರಾ ಮಾತು ಕೇಳಿ ಪರಿಣೀತಿ ಎಮೋಶನಲ್ ಆಗಿದ್ಯಾಕೆ?

ಪರಿಣೀತಿ ಚೋಪ್ರಾ -ಪ್ರಿಯಾಂಕ ಚೋಪ್ರಾ ಎಮೋಶನಲ್ ಕ್ಷಣ | ಅಕ್ಕನ ಬಗ್ಗೆ ಎಮೋಶನಲ್ ಆದ ಪರಿಣೀತಿ |  ಪಿಗ್ಗಿ ಬರ್ತಡೇ ದಿನ ಪರಿಣೀತಿ ಎಮೋಶನಲ್ ಆಗಿದ್ಯಾಕೆ? 

Parineeti Chopra down an emotional about Priyanka Chopra
Author
Bengaluru, First Published Oct 6, 2018, 4:01 PM IST
  • Facebook
  • Twitter
  • Whatsapp

ಬೆಂಗಳೂರು (ಅ. 06): ನಮ್ಮ ಸಂತಸದ ಕ್ಷಣಗಳು, ದುಃಖದ ಸಮಾಚಾರಗಳನ್ನು ಮೊದಲು ಹೇಳಲು ಬಯಸುವುದು ನಮ್ಮ ಆತ್ಮೀಯರಿಗೆ ಮಾತ್ರ. ಎಲ್ಲರಿಗೂ ಈ ರೀತಿಯ ಆತ್ಮೀಯ ಜೀವಗಳು ಎಲ್ಲಾ ಕಾಲಕ್ಕೂ ದಕ್ಕುವುದಿಲ್ಲ.

ದಕ್ಕಿದವರು ನಿಜಕ್ಕೂ ಅದೃಷ್ಟವಂತರೇ ಸರಿ. ಈಗ ಇದನ್ನು ಹೇಳುತ್ತಿರುವುದು ಯಾಕೆ ಎಂದರೆ, ಪರಿಣಿತಿ ಚೋಪ್ರಾ ಮತ್ತು ಪ್ರಿಯಾಂಕಾ ಚೋಪ್ರಾ ನಡುವೆ ಇಂಥಹುದೊಂದು ಆತ್ಮೀಯತೆ ಇದೆ. ಇದೇ ಆತ್ಮೀಯತೆ ಪರಿಣಿತಿಯನ್ನು ಅರ್ಧ ರಾತ್ರಿಯಲ್ಲಿ ಕಣ್ಣೀರು ಹಾಕುವಂತೆ ಮಾಡಿದೆ.

ಇದಕ್ಕೆ ಅಸಲಿ ಕಾರಣ ಏನೆಂದರೆ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜಾನ್ಸ್ ಲವ್. ಪ್ರಿಯಾಂಕಾ ಮತ್ತು ನಿಕ್ ಜಾನ್ಸ್ ಇಬ್ಬರೂ ಲವ್ ಮಾಡುತ್ತಿದ್ದಾರೆ. ನಿಕ್ ಮೊದಲ ಬಾರಿಗೆ ಪ್ರಿಯಾಂಕಾ ಬರ್ತ್‌ಡೇ ದಿನವೇ ಪ್ರಪೋಸ್ ಮಾಡಿದ ಎನ್ನುವ ಸತ್ಯ ಮೊದಲಿಗೆ ಗೊತ್ತಾದದ್ದು ಪರಿಣಿತಿ ಚೋಪ್ರಾಗೆ. ಅದನ್ನು ಹೇಳಿದ್ದು ಸ್ವತಃ ಪ್ರಿಯಾಂಕಾ. ಅದಕ್ಕೆ ಕಾರಣ ಅವರಿಬ್ಬರ ಮಧ್ಯೆ ಇದ್ದಂತಹ ಬಾಂಧವ್ಯ.

ಇದೆಲ್ಲವನ್ನೂ ಈಗ ಸ್ವತಃ ಪರಿಣಿತಿಯೇ ಹಂಚಿಕೊಂಡಿದ್ದಾರೆ. ‘ನಾನು ಅಂದು ರಾತ್ರಿ ಪ್ರಿಯಾಂಕಾಗೆ ಬರ್ತ್‌ಡೆ ವಿಶ್ ಮಾಡಿ ಮಲಗಿದ್ದೆ. ಮೂರು ಗಂಟೆ ರಾತ್ರಿಗೆ ಅವಳು ನಾಲ್ಕು ಬಾರಿ ಕಾಲ್ ಮಾಡಿದ್ದಳು. ನನಗೆ ಗೊತ್ತಿರಲಿಲ್ಲ. ಆಮೇಲೆ ಎದ್ದು ರಿಪ್ಲೆ ಮಾಡಿದಾಗ ಅವಳು ‘ನಿಕ್ ಜಾನ್ಸ್ ಪ್ರಪೋಸ್ ಮಾಡಿರುವುದಾಗಿ, ಅದನ್ನು ನಾನು ಒಪ್ಪಿಕೊಂಡಿದ್ದು, ಈ ವಿಷಯವನ್ನು ನಿನಗೇ ಮೊದಲು ಹೇಳಬೇಕು ಎಂದು ಕಾಲ್ ಮಾಡಿದೆ’ ಎಂದು ಹೇಳಿದಾಗ ನನಗೆ ಏನು ಮಾತನಾಡಬೇಕೋ ಗೊತ್ತೇ ಆಗಲಿಲ್ಲ. ಅವಳ ಮೇಲಿನ ಅಭಿಮಾನಕ್ಕೆ ಕಣ್ಣಲ್ಲಿ ನೀರು ಬಂದು ತುಂಬಾ ಅತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ ಪರಿಣಿತಿ ಚೋಪ್ರಾ. 


 

Follow Us:
Download App:
  • android
  • ios