ರಣವೀರ್ ಸಿಂಗ್'ಗೆ ಅಲ್ಲಾವುದ್ದೀನ್ ಖಿಲ್ಜಿ ಕಾಟ. ಖಿಲ್ಜಿ ಥರವೇ ಆಡ್ತಾರೆ ರಣವೀರ್ ಸಿಂಗ್. ಪರಕಾಯ ಪ್ರವೇಶದ ಪರಿಣಾಮ ಘೋರ.ಪದ್ಮಾವತಿ ಪಾತ್ರದಾರಿ ದೀಪಿಕಾ ಪರಿಸ್ಥಿತಿನೂ ಇದಕ್ಕೆ ಹೊರತಾಗಿಲ್ಲ. ಇಬ್ಬರೂ ಮನೋ ವೈದ್ಯರ ಮೊರೆ ಹೋಗಿದ್ದಾರೆ. ಪದ್ಮಾವತಿ ಚಿತ್ರವೇ ಇದಕ್ಕೆಲ್ಲ ಕಾರಣ.

ಬಾಲಿವುಡ್​'ನ ಪದ್ಮಾವತಿ ಚಿತ್ರ ದೊಡ್ಡ ಭರವಸೆ ಮೂಡಿಸಿದೆ. ಅದಕ್ಕೆ ಕಲಾವಿದರ ಡೆಡಿಕೇಷನೇ ಕಾರಣ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅಲ್ಲಾವುದ್ದೀನ್ ಖಿಲ್ಜಿ ಆಗಿದ್ದಾರೆ ನಟ ರಣವೀರ್ ಸಿಂಗ್. ಅದಕ್ಕೆ ಖಿಲ್ಜಿ ಪಾತ್ರ ಜನರನ್ನ ಸೆಳೆಯುತ್ತಿದೆ. ಒಂದು ವರ್ಷಗಳ ಕಾಲ ಈ ಪಾತ್ರದಲ್ಲಿಯೇ ಇದ್ದ ರಣವೀರ್ ಪರಸ್ಥಿತಿ ವಿಚಿತ್ರವಾಗಿಯೇ ಇದೆ. ಈಗ ಖಿಲ್ಜಿ ಥರನೇ ರಣವೀರ್ ವರ್ತನೆ ಇದೆಯಂತೆ

ಖಿಲ್ಜಿ ಪಾತ್ರದಿಂದ ರಣವೀರ್ ಹೊರ ಬಂದೇ ಇಲ್ಲ. ಸ್ನೇಹಿತರು ಈತನ ವರ್ತನೆ ಕಂಡು ಮನೋವೈದ್ಯರನ್ನು ಸಂಪರ್ಕಿಸು ಅಂತ ಸಲಹೆನೂ ಕೊಟ್ಟಿದ್ದಾರಂತೆ . ರಣವೀರ್ ಆ ಕೆಲಸವನ್ನೂ ಮಾಡಿ ಆಗಿದೆ. ರಣವೀರ್'ಗೆ ಬಂದ ಸ್ಥಿತಿ ದೀಪಿಕಾಗೂ ಬಂದೊದಗಿದೆ.

ಪದ್ಮಾವತಿಯಾಗಿ ಒಂದು ವರ್ಷ ಇದ್ದ ದೀಪಿಕಾ ಇನ್ನೂ ಅದೇ ಮೂಡ್​​ 'ನಲ್ಲಿಯೇ ಇದ್ದಾರಂತೆ. ಯಾಕಂದ್ರೆ ಚಿತ್ರದ ಕೊನೆಯ ದೃಶ್ಯ ಈ ಬೆಡಗಿಯನ್ನ ಡಿಸ್ಟರ್ಬ್ ಮಾಡಿದೆ. ಆದ್ದರಿಂದ ದೀಪಿಕಾ ಕೂಡ ಮನೋವೈದ್ಯರನ್ನ ಸಂಪರ್ಕಿಸಿ ಆಗಿದೆ. ಪರಕಾಯ ಪ್ರವೇಶದ ಪರಿಣಾಮ ಎಷ್ಟಿರುತ್ತೆ ಅಲ್ಲವೇ..?ಅದಕ್ಕೇ ಅಲ್ಲವೇ ಇವರನ್ನ ಗ್ರೇಟ್ ಕಲಾವಿದರು ಅನ್ನೋದು.