ನವದೆಹಲಿ[ಡಿ.06]: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕ ನಿಕ್‌ ಜೋನ್ಸ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೂ, ಇವರಿಬ್ಬರ ಕುರಿತಾದ ವಿವಾದಗಳು ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಅಮೆರಿಕದ ನ್ಯೂಯಾರ್ಕ್ ನಿಯತಕಾಲಿಕೆಯ ‘ದ ಕಟ್‌’ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ‘ಜಾಗತಿಕ ವಂಚನೆಯ ನಟಿ’ ಎಂದು ಕರೆಯಲಾಗಿದೆ.

ಇದನ್ನೂ ಓದಿ: Video: ಪಿಗ್ಗಿಯನ್ನು ವಧುವಾಗಿ ನೋಡಿದ ನಿಕ್ ಕಣ್ಣಿಂದ ಆನಂದ ಬಾಷ್ಪ!

ಮಾರಿಯಾ ಸ್ಮಿತ್‌ ಅವರು ‘ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ ಪ್ರೀತಿ ನಿಜವೇ?’ ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ನಿಕ್‌ ಜೋನ್ಸ್‌ ಇಚ್ಛೆಗೆ ವಿರುದ್ಧವಾಗಿ ಮೋಸದ ಸಂಬಂಧವನ್ನು ಪ್ರಿಯಾಂಕಾ ಹೊಂದಿದ್ದಾರೆ. ಹಾಲಿವುಡ್‌ನ ಹೊಸ ನಟಿಯೊಂದಿಗೆ ಹೆಜ್ಜೆ ಹಾಕಲು ನಿಕ್‌ ಬಯಸಿದ್ದರು. ಆದರೆ, ಜಾಗತಿಕ ವಂಚನೆಯ ನಟಿಯಂದ ವಿವಾಹವೆಂಬ ಜೀವಾವಧಿ ಶಿಕ್ಷೆಗೆ ಒಳಗಾಗಬೇಕಾಯಿತು. ಪ್ರಿಯಾಂಕಾ ಹಣದ ಹಿಂದೆ ಬಿದ್ದಿರುವ ಸೆಲೆಬ್ರಿಟಿ. ವಿನೀತ ಸ್ವಭಾವದ ಜೋನ್ಸ್‌ರನ್ನು ಹಣ ಹಾಗೂ ಅಧಿಕಾರಕ್ಕಾಗಿ ಪ್ರಿಯಾಂಕಾ ವಿವಾಹ ಆಗಿದ್ದಾರೆ ಎಂದು ಲೇಖನದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಪ್ರಿಯಾಂಕಾ- ನಿಕ್ ಅದ್ಧೂರಿ ವಿವಾಹ: ಇಲ್ಲಿವೆ ನೋಡಿ 3 ದಿನದ ಫೋಟೋಗಳು

ಜೊತೆಗೆ ವಯಸ್ಕ ಮಹಿಳೆಯೊಬ್ಬಳನ್ನು ವಿವಾಹವಾಗುವ ಅನಿವಾರ್ಯತೆ ನಿಕ್‌ಗೇನಿತ್ತು ಎಂದೂ ಪ್ರಶ್ನಿಸಲಾಗಿದೆ.

ಸದ್ಯ ಈ ಲೇಖಲನದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಬಾಲಿವುಡ್ ಸ್ಟಾರ್ಸ್ ಸೇರಿದಂತೆ ಬಹುತೇಕ ಮಂದಿ ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.