ಬೆಂಗಳೂರಿನ ಅಂಚಿನಲ್ಲಿ ಮತ್ತೊಂದು ಸಿನಿಮಾ ಮಾಲ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 11, Oct 2018, 1:52 PM IST
New mutliplex mall in Bangalore by Sathyam Company
Highlights

ಕನ್ನಡ ಚಿತ್ರರಂಗದಲ್ಲಿ ಪದೇ ಪದೇ ಕೇಳಿಬರುವುದು ಥಿಯೇಟರ್‌ಗಳ ಸಮಸ್ಯೆ. ಆದರೆ, ಮಲ್ಟಿಪ್ಲೆಕ್್ಸಗಳು ನಿಧಾನಕ್ಕೆ ತಲೆ ಎತ್ತುತ್ತಿವೆ

ಈಗ ಬೆಂಗಳೂರಿನ ವೈಟ್‌ಫೀಲ್ಡ್ ರಸ್ತೆಯ ಐಟಿಪಿಎಲ್ ಬಳಿ ಹೊಸದಾಗಿ ಅದ್ದೂರಿಯಾದ ಮಲ್ಟಿಪ್ಲೆಕ್ಸ್ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗಿದೆ. ಪ್ರತಿಷ್ಠಿತ ಸತ್ಯಂ ಕಂಪನಿಯ ಸಾರಥ್ಯದಲ್ಲಿ ಪಾರ್ಕ್ ಸ್ಕ್ವೈಯರ್ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ಮಾಲ್‌ನಲ್ಲಿ ಒಟ್ಟು 4 ಸ್ಕ್ರೀನ್‌ಗಳನ್ನು ಒಳಗೊಂಡಿದೆ.
 
4 ಕೆ ಗುಣಮಟ್ಟದ ಸ್ಕ್ರೀನ್‌ಗಳು ಇದಾಗಿದ್ದು, ದಸರಾ ಹಬ್ಬದ ಸಡಗರದಂದೇ ಪಾರ್ಕ್ ಸ್ಕ್ವೈರ್ ಹೆಸರಿನ ಸಿನಿಮಾ ಮಾಲ್ ಉದ್ಘಾಟನೆಗೊಂಡಿದೆ. ಅತ್ಯಂತ ಸ್ಟೈಲೀಶ್ ಎನಿಸುವ ಸಿನಿಮಾ ಹಾಲ್, ಕೂರಲು ಆರಾಮದಾಯಕ ಕುರ್ಚಿಗಳು, ಗೋಲ್ಡ್ ಕ್ಲಾಸ್‌ಗಳನ್ನು ಒಳಗೊಂಡಿದೆ. ಸತ್ಯಂ ಸಿನಿಮಾಸ್ ಕಂಪನಿ ಭಾರತ ಸೇರಿದಂತೆ ಪ್ರಪಂಚಾದ್ಯಂತ ಒಟ್ಟು 71 ಸ್ಕ್ರೀನ್‌ಗಳನ್ನು ಒಳಗೊಂಡಿದೆ. ಕನ್ನಡ ಸೇರಿದಂತೆ ಎಲ್ಲ ಭಾಷೆಗಳ ಸಿನಿಮಾಗಳು ಇಲ್ಲಿ ಬಿಡುಗಡೆಯಾದರೂ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಇವರ ಉದ್ದೇಶ. ‘ಮಾಲ್‌ಗೆ ಚಿತ್ರ ನೋಡಲು ಬರುವವರಿಗೆ ಉಚಿತ ವೈಫೈ ಸೌಲಭ್ಯವನ್ನು ಸಹ ನೀಡಲಾಗಿದೆ. ಪೋರ್ಟೇಬಲ್ ಚಾರ್ಜಿಂಗ್ ಸೌಲಭ್ಯ ಕೂಡ ಇದೆ’ ಎನ್ನುತ್ತಾರೆ ಸತ್ಯಂ ಸಿನಿಮಾಸ್‌ನ ಅಧ್ಯರ್ಷ ಸ್ವರೂಪ್ ರೆಡ್ಡಿ.
loader