ಸಾಮಾಜಿಕ ಜಾಲತಾಣದಲ್ಲಿ ಇನ್‍ಸ್ಟಾಗ್ರಾಂ ಇಂದು ಸಾಕಷ್ಟು ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, ಪೋಟೋ ಹಂಚಿಕೊಳ್ಳಲು, ಸೆಲೆಬ್ರಿಟಿಗಳು ಅಭಿಮಾನಿಗಳನ್ನು ತಲುಪಲು ಇದೊಂದು ಒಳ್ಳೆಯ ಮಾಧ್ಯಮವಾಗಿದ್ದು, ಇದೇ ಇನ್‍ಸ್ಟಾಗ್ರಾಂ ಫ್ರಾನ್ಸ್ ನಲ್ಲಿ ನೀಡುತ್ತಿರುವ ಟಿವಿ ಜಾಹೀರಾತಿನಲ್ಲಿ ಕನ್ನಡ ಡಿಂಡಿಮ ಹಾಡನ್ನು ಬಳಸಿಕೊಳ್ಳಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಕನ್ನಡ ನುಡಿಯನ್ನು ರಾಜ್ಯ ಬಿಟ್ಟು ಹೊರಗೆ ಕೇಳಿದಾಗಲೇ ಮೈ ರೋಮಾಂಚವಾಗುತ್ತದೆ ಅಂತಹುದರಲ್ಲಿ ವಿದೇಶದ ನೆಲವೊಂದರಲ್ಲಿ ನಮ್ಮ ಹಾಡು ಮಿಂಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಕುವೆಂಪು ರಚಿಸಿದ 'ಬಾರಿಸು ಕನ್ನಡ ಡಿಂಡಿಮವ' ಹಾಡು ಈ ಜಾಹೀರಾತಿನಲ್ಲಿ ಜೀವವಾಗಿದೆ. 

ಈ ಹಿಂದೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ 'ಬಾರಿಸು ಕನ್ನಡ ಡಿಂಡಿಮವ' ಹಾಡಿಗೆ ಹೊಸದೊಂದು ರೂಪ ಕೊಟ್ಟಿದ್ದರು, ಈಗ ಇನ್‍ಸ್ಟಾಗ್ರಾಂ ಜಾಹೀರಾತು ಮತ್ತೊಂದು ಹೊಸ ದಾಟಿಯನ್ನು ನೀಡಿದೆ.