’ನಟ ಸಾರ್ವಭೌಮ’ನಿಗೆ ಬರ್ತಿದ್ದಾಳೆ ಹೊಸ ನಾಯಕಿ

First Published 31, May 2018, 4:36 PM IST
New Heroin introduce to Nata Sarva Bhouma Movie
Highlights

ಪವನ್ ಒಡೆಯರ್ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರದಲ್ಲಿ ನಾಯಕ ನಟ ಪುನೀತ್ ರಾಜ್‌ಕುಮಾರ್ ಜತೆ ಮತ್ತೊಬ್ಬ ನಟಿ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ರಚಿತಾ ರಾಮ್ ನಾಯಕಿ ನಟಿಸುತ್ತಿರುವಾಗಲೇ ಎರಡನೇ ನಾಯಕಿ ಕೂಡ ಈ ಚಿತ್ರದಲ್ಲಿ ಎಂಟ್ರಿಯಾಗಲಿದ್ದಾರೆಂಬ ಗುಟ್ಟು ಪವನ್ ಒಡೆಯರ್ ಬಿಟ್ಟುಕೊಟ್ಟಿದ್ದಾರೆ. 

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದ ಮತ್ತೊಂದು ಚಿತ್ರದ ಮತ್ತೊಂದು ಲುಕ್ ಬಿಡುಗಡೆಯಾಗಿದೆ. ‘ಹೌದು, ಚಿತ್ರದಲ್ಲಿ ಇಬ್ಬರು ನಾಯಕಿಯರು. ಈಗಾಗಲೇ ರಚಿತಾ ರಾಮ್ ಆಯ್ಕೆ ಆಗಿದ್ದಾರೆ. ಮತ್ತೊಬ್ಬರು ನಾಯಕಿ ಕೂಡ ಇದ್ದಾರೆ. ಅವರದ್ದು ಸಹ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ. ಹೀಗಾಗಿ ಹೆಸರು ಇರುವ ಒಳ್ಳೆಯ ನಟಿಯನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾಯುತ್ತಿದ್ದೇವೆ. ಸದ್ಯಕ್ಕೆ ಚಿತ್ರೀಕರಣ ಭರದಿಂದ ಸಾಗಿದೆ.

ಇನ್ನೆರಡು ದಿನದಲ್ಲಿ ಚಿತ್ರದ ಎರಡನೇ ನಾಯಕಿಯ ಆಯ್ಕೆ ಮಾಡಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್. 

loader