ಡಕಾಯಿತರ ಚಂಬಲ್: ಸಿನಿರಸಿಕರಿಗೆ ಫುಲ್ ಫ್ಯಾಮಿಲಿ ಪ್ಯಾಕೇಜ್!

ಡಕಾಯಿತರ ಕಥೆಯನ್ನ ಮೂಲವಾಗಿಟ್ಟುಕೊಂಡು ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಚಂಬಲ್ ಬಿಡುಗಡೆಯಾಗುತ್ತಿದೆ. ಜನಪರವಾದ ಅಧಿಕಾರಿ, ಭ್ರಷ್ಟ ಕುಳಗಳ ಜೊತೆಗೇ ಭರಪೂರವಾದ ಕಾಮಿಡಿ, ನವಿರಾದ ಪ್ರೇಮ ಕಥೆ ಒಳಗೊಂಡ ಈ ಸಿನಿಮಾ ಸಿನಿರಸಿಕರನ್ನ ಮೋಡಿ ಮಾಡಲಿದೆ. 

Neenasam satish sonu gowdas Chambal kannada Movie hit the screens on this week

ಬೆಂಗಳೂರು(ಫೆ.21):  ಜೇಕಬ್ ವರ್ಗೀಸ್ ರಿಯಲಿಸ್ಟಿಕ್ ಚಿತ್ರಗಳಿಗೆ ಹೆಸರಾದವರು. ಈ ಹಿಂದೆ ಗಣಿ ಧೂಳಿನೊಳಗೆ ಮುಚ್ಚಿ ಹೋಗಿದ್ದ ಸತ್ಯಗಳಿಗೆ ಪೃಥ್ವಿ ಮೂಲಕ ಅವರು ಕಣ್ಣಾಗಿದ್ದರು. ಈಗ ಜನಪರ ಅಧಿಕಾರಿಯೊಬ್ಬರ ಸ್ಫೂರ್ತಿಯಿಂದ ಊರಿಗೂರನ್ನೇ ಹರಿದುಮುಕ್ಕುವ ಡಕಾಯಿತರ ಕಥೆಯೊಂದನ್ನು ಚಂಬಲ್ ಮೂಲಕ ಹೇಳ ಹೊರಟಿದ್ದಾರೆ.

ಇದನ್ನೂ ಓದಿ: ಚಂಬಲ್ ನನಗೆ ಆಸ್ಟ್ರೇಲಿಯಾ ಪಿಚ್ ಇದ್ದಂತೆ: ನೀನಾಸಂ ಸತೀಶ್

ಚಂಬಲ್ ಯಾರ ಬದುಕಿನ ಕಥೆಯನ್ನೂ ಆಧರಿಸಿದ ಕಥೆಯಲ್ಲ. ಈ ವಿಚಾರವನ್ನು ನಿರ್ದೇಶಕರು ಈಗಾಗಲೇ ಖಚಿತಪಡಿಸಿದ್ದಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಜನಪರವಾದ ಅಧಿಕಾರಿ, ಭ್ರಷ್ಟ ಕುಳಗಳ ಜೊತೆಗೇ ಭರಪೂರವಾದ ಕಾಮಿಡಿ, ನವಿರಾದ ಪ್ರೇಮ ಕಥೆ ಸೇರಿದಂತೆ ಎಲ್ಲವೂ ಇದೆ.

ಇದನ್ನೂ ಓದಿ: ಸತೀಶ್ ನೀನಾಸಂಗೆ ಸಾಥ್ ಕೊಟ್ಟ ಪವರ್ ಸ್ಟಾರ್!

ಆದರೆ ಇದೆಲ್ಲದರ ಜೊತೆಗೇ ಚಂಬಲ್ ಸಾಮಾಜಿಕ ಕ್ರಾಂತಿಯೊಂದಕ್ಕೆ ಉತ್ತೇಜನ ನೀಡುವಂಥಾ ವಿಚಾರಗಳನ್ನೂ ಕೂಡಾ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಎಲ್ಲರನ್ನೂ ಕಿತ್ತು ತಿನ್ನುವ ಭ್ರಷ್ಟರ ಬಗ್ಗೆ ಜನಸಾಮಾನ್ಯರಲ್ಲಿಯೂ ಒಂದು ಆಕ್ರೋಶವಿದೆ. ಅದನ್ನು ಬಡಿದೆಬ್ಬಿಸುವಂಥಾ ರೋಚಕ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅದರ ಮಜಾ ಎಂಥಾದ್ದೆಂಬುದು ಈ  ವಾರವೇ ತಿಳಿಯಲಿದೆ.

Latest Videos
Follow Us:
Download App:
  • android
  • ios