ಇದರ ಅಂಗವಾಗಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ, ರಂಗಗೀತೆ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಸಂವಾದ, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರ ಪ್ರದರ್ಶನ ಸೇರಿ ಅನೇಕ ಚಟುವಟಿಕೆಗಳನ್ನು ಸೆಪ್ಟೆಂಬರ್‌ 01ರಿಂದ ಅಕ್ಟೋಬರ್‌ 02ರ ವರೆಗೆ ನಡೆಸುತ್ತಿದೆ.

ಸೆ. 01

ನಟನದ ವಿಶಿಷ್ಟಪ್ರಯೋಗ ಮಂಡ್ಯ ರಮೇಶ್‌ ನಿರ್ದೇಶನದ ಆರ್‌. ಪರಮಶಿವನ್‌ ಸಂಗೀತ ನೀಡಿರುವ ತೋರಣಗಲ್‌ ರಾಜಾರಾಯ ವಿರಚಿತ ‘ಸುಭದ್ರಾಕಲ್ಯಾಣ’ ಎಂಬ ಶುದ್ಧ ಕಂಪನಿ ಶೈಲಿಯ ನಾಟಕ ಪ್ರದರ್ಶನ.

ಸೆ.08

ರಂಗಭೂಮಿ ಉಡುಪಿ ಪ್ರಸ್ತುತ ಪಡಿಸುವ ‘ಕಾಮ್ಯ ಕಲಾ ಪ್ರತಿಮಾ’. ಗಣೇಶ ಮಂದಾರ್ತಿ ನಿರ್ದೇಶನದಲ್ಲಿ.

ಸೆ. 15

ಪಿ.ಲಂಕೇಶ್‌ ರಚನೆಯ ‘ಟಿ.ಪ್ರಸನ್ನನ ಗೃಹಸ್ಥಾಶ್ರಮ’. ರಂಗ ಶಿಕ್ಷಕ ಮೇಘ ಸಮೀರ ನಿರ್ದೇಶನದಲ್ಲಿ.

ಸೆ. 18

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ವಿಷ್ಣುವರ್ಧನ ನಾಟಕೋತ್ಸವದ ಅಂಗವಾಗಿ ಪ್ರದರ್ಶನ ಕಂಡ ಹಬೀಬ್‌ ತನ್ವೀರ್‌ ಅವರ ‘ಚೋರ ಚರಣ ದಾಸ’ ನಾಟಕ. ಮಂಡ್ಯ ರಮೇಶ್‌ ನಿರ್ದೇಶನದಲ್ಲಿ.

ಸೆ. 19

ಮಣಿಪಾಲ್‌ ಯುನಿವರ್ಸಿಟಿ ಪ್ರೆಸ್‌ ಅವರು ಆಯೋಜನೆಯಲ್ಲಿ ಪ್ರೊ. ಡಿ.ಎ. ಶಂಕರ್‌ ಅವರ ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯ ಇಂಗ್ಲಿಷ್‌ ಅನುವಾದ ಅ Shrine Of Sarasamma  ಮತ್ತು ಅಕ್ಕಮಹಾದೇವಿ ಪುಸ್ತಕಗಳ ಬಿಡುಗಡೆ.

ಅದೇ ವೇದಿಕೆಯಲ್ಲಿ ಬಿ.ವಿ.ಕಾರಂತ ನಿರ್ದೇಶನದ ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಚೋಮನ ದುಡಿ’ ಚಲನಚಿತ್ರ ಪ್ರದರ್ಶನ.

ಸೆ. 21

ರಂಗಭೂಮಿ ಪ್ರತಿಷ್ಠಾನ ಕೊಡಗು ಪ್ರಸ್ತುತ ಪಡಿಸುತ್ತಿರುವ ಕೊಡವ ನಾಟಕ ‘ಬದ್‌ಕ್‌’ ಪ್ರದರ್ಶನ. ರಚನೆ ಮತ್ತು ನಿರ್ದೇಶನ ಅಡ್ಡಂಡ ಸಿ.ಕಾರ್ಯಪ್ಪ.

ಸೆ. 22

ಹಬೀಬ್‌ ತನ್ವೀರ್‌ ಅವರ ‘ಚೋರ ಚರಣ ದಾಸ’ ನಾಟಕ ಮಂಡ್ಯ ರಮೇಶ್‌ ನಿರ್ದೇಶನದಲ್ಲಿ.

ಸೆ. 29

ರವೀಂದ್ರನಾಥ ಟ್ಯಾಗೋರ್‌ ಅವರ ‘ಕೆಂಪು ಕಣಗಿಲೆ’ ನಾಟಕ ಪ್ರದರ್ಶನ. ನಾಟಕದ ರಂಗರೂಪ ಸುಧಾ ಆಡುಕುಳ, ಸಂಗೀತ ಮತ್ತು ನಿರ್ದೇಶನ ಡಾ.ಶ್ರೀಪಾದ ಭಟ್‌.

ಸೆ. 30

'Stage Chemistry- Neuro Psychiatric SD is order on stage ಎಂಬ ಆಂಗ್ಲ ನಾಟಕವು ಡಾ.ಆರ್‌. ಪೂರ್ಣಿಮಾ ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ.

ಅ. 02

ಪ್ರೇಮಾನಂ ಗಗಜವಿ ಅವರ ‘ಗಾಂಧಿ-ಅಂಬೇಡ್ಕರ್‌’ ನಾಟಕ ಪ್ರದರ್ಶನ. ಇದನ್ನುಡಿ.ಎಸ್‌. ಚೌಗಲೆ ಅವರು ಕನ್ನಡಕ್ಕೆ ಅನುವಾದಿಸಿದ್ದು, ಸಿ. ಬಸವಲಿಂಗಯ್ಯ ನಿರ್ದೇಶಿಸಿದ್ದಾರೆ.

ಸಮಯ: ಪ್ರತಿ ದಿನ ಸಂಜೆ 6.30ಕ್ಕೆ

ಸ್ಥಳ: ನಟನ, ರಾಮಕೃಷ್ಣ ನಗರ, ಮೈಸೂರು

ದೂ. 9945555570, 9480468327