ನನ್ ಮಗಂದ್ ನಾನೇ ಬಿಗ್ ಬಾಸ್, ಅ.17 ರ ಸಂಚಿಕೆ ಭಾಗ-1

ನಾನು ಸುದೀಪ್ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಕಾರ್ಯಕ್ರಮ ಶುರುಮಾಡಿದ ಹುಚ್ಚ ವೆಂಕಟ್ ಬಿಗ್ ಬಾಸ್ ಪ್ರೋಗ್ರಾಂ ಅಷ್ಟೊಂದು ಚೆನ್ನಾಗಿ ಬಂದಿಲ್ಲ ಅಂತ ಹೇಳಿದರು. ಜೊತೆಗೆ ತಮ್ಮದೇ ಸ್ಟೈಲ್ ನಲ್ಲಿ 'ನನಗೆ ಬಿಗ್ ಬಾಸ್ ಪ್ರೋಗ್ರಾಂ ಬೇಡ ಸ್ವಾಮಿ, ತಲೆನೋವು ಯಾಕೆ ಬೇಕು ಸ್ವಾಮಿ ಎಂದು ಹಾಡಿದರು. ಇದನ್ನು ಕೇಳಿ ಹೀಗಂದ್ರೆ ಹೇಗೆ ಸ್ವಾಮಿ ಅಂತ ಬಿಗ್ ಬಾಸ್ ತಲೆಕೆರಿದುಕೊಂಡಿರಬಹುದು!

ವಾಣಿಶ್ರೀ ಎಲಿಮನೇಟ್ ಆಗಿರುವುದಕ್ಕೆ ಸಿಸ್ಟರ್ ಸೆಂಟಿಮೆಂಟ್ ವ್ಯಕ್ತಪಡಿಸಿದ ವೆಂಕಟ್, ನನಗೆ ಬೇಸರವಾಯ್ತು. ವಾಣಿಶ್ರೀ ನನಗೆ ಸಿಸ್ಟರ್ ಇದ್ದಂತೆ ಎಂದು ಅವರಿಗೋಸ್ಕರ ಒಂದು ಹಾಡನ್ನೂ ಹಾಡಿದರು.

ಕಿರಿಕ್ ಕೀರ್ತಿ, ಪ್ರಥಮ್ ಜಗಳದ ಬಗ್ಗೆ ವೆಂಕಟ್ ಏನು ಹೇಳಿದರು ಇಲ್ಲಿದೆ ಕೇಳಿ.