ಬೆಂಗಳೂರು(ಅ.23)  ಗಂಡ-ಹೆಂಡತಿ ಚಿತ್ರದಲ್ಲಿ ಒತ್ತಾಯಪೂರ್ಕವಾಗಿ, ಉದ್ದೇಶಪೂರ್ವಕಾವಾಗಿ ನನ್ನಿಂದ ಕಿಸ್ ಸೀನ್ ಗಳನ್ನು ಮಾಡಿಸಿಕೊಳ್ಳಲಾಯಿತು ಎಂದು  ನಟಿ ಸಂಜನಾ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮಾಡಿರುವ ಕಿರುಕುಳದ ಆರೋಪಕ್ಕೆ ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ದಾಖೆಲೆಯ ಉತ್ತರ ನೀಡಿದ್ದಾರೆ.

ಗಂಡ-ಹೆಂಡತಿ ಚಿತ್ರದ ಬಿಡುಗಡೆ ವೇಳೆ ಸಂಜನಾ ಕಾಣಿಸಿಕೊಂಡ ರೀತಿ ಚರ್ಚೆಗೆ ಗ್ರಾಸವಾಗಿತ್ತು. ಚಿತ್ರ ಬಿಡಗುಗಡೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಜನಾ ಅವರು, ನಾವು ಗೌರಮ್ಮನಂತಿದ್ದರೆ ಯಾರೂ ನಮ್ಮನ್ನು ನೋಡುವುದಿಲ್ಲ. ಪಾತ್ರಕ್ಕೆ ಬೇಕಂತೆ ನಾವು ಅಭಿನಯಿಸಬೇಕು ಎಂದು ಸ್ವತಃ ಅವರೇ ಹೇಳಿದ್ದರು.  ಅದಕ್ಕೆ ಪತ್ರಿಕೆ ವರದಿಗಳು ಸಾಕ್ಷ್ಯ ನೀಡುತ್ತಿವೆ ಎಂದು 'ಕನ್ನಡಪ್ರಭ' ಪತ್ರಿಕೆಯ 2006ರ ವರದಿ ಉಲ್ಲೇಖ ಮಾಡಿದರು.

#METOO : ಸ್ನೇಹಿತನ ನೆರವಿಗೆ ಧಾವಿಸಿದ ಖುಷ್ಬೂ

ಚಿತ್ರದ ಫೋಟೋ ಶೂಟ್ ನಲ್ಲಿಯೂ ಕಿಸ್ಸಿಂಗ್ ಸೀನ್ ಇತ್ತು, ಆಮಂತ್ರಣ ಪತ್ರಿಕೆ ಸಹ ಚುಂಬನದ ಫೋಟೋದ ಮೇಲೆಯೇ ಪ್ರಿಂಟ್ ಆಗಿತ್ತು. ಅಷ್ಟಕ್ಕೂ ಇದೊಂದು ರಿಮೇಕ್ ಚಿತ್ರ. ಮೊದಲೆ ಎಲ್ಲವನ್ನು ವಿವರಿಸಿಯೇ ಅಗ್ರಿಮೆಂಟ್ ಗೆ ಸಹಿ ಹಾಕಿಸಿಕೊಳ್ಳಲಾಗುತ್ತದೆ. ತಮ್ಮ ತಾಯಿ ಸಹ ನನ್ನ ವೃತ್ತಿ ಜೀವನಕ್ಕೆ ನೆರವಾಗಿ ನಿಲ್ಲುತ್ತಾರೆ ಎಂದು ಅಂದು ಸಂಜನಾ ಹೇಳಿದ್ದರು. ಆದರೆ ಈಗ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.