Asianet Suvarna News Asianet Suvarna News

ಟೀನೇಜ್ ಪ್ರೀತಿಯ ನಡುವೆ ಅಂತರವಿರಲಿ

ಟಿನೇಜ್ ಲವ್‌ಸ್ಟೋರಿಯೊಂದಿಗೆ ಕುತೂಹಲ ಮೂಡಿಸಿರುವ ಚಿತ್ರ. ನವ ಪ್ರತಿಭೆ ಪ್ರಖ್ಯಾತ್ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾ.

Naduve Antaravirali sandalwood  movie to release on 5 October
Author
Bengaluru, First Published Oct 5, 2018, 11:43 AM IST
  • Facebook
  • Twitter
  • Whatsapp

ಹಾಗೆಯೇ ‘ವಾಸ್ತು ಪ್ರಕಾರ’ ಖ್ಯಾತಿಯ ನಟಿ ಐಶಾನಿ ಶೆಟ್ಟಿ ಎರಡು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ರವೀನ್ ಈ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದು, ರವೀನ್ ಹಾಗೂ ಜಿ.ಕೆ. ನಾಗರಾಜು ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ.ಮಂಜು ಮಾಂಡವ್ಯ ಸಂಭಾಷಣೆ, ಯೋಗರಾಜ್ ಭಟ್, ಗೌಸ್‌ಪೀರ್ ಹಾಗೂ ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಯುವ ಜನರನ್ನೇ ಕೇಂದ್ರವಾಗಿಟ್ಟು ಈ ಕತೆ ಹೆಣೆಯಲಾಗಿದೆ. ಮಕ್ಕಳ ಮೇಲೆ ಏನೆಲ್ಲ ಕನಸು ಕಟ್ಟಿಕೊಳ್ಳುವ ಪೋಷಕರಿಗೂ ಚಿತ್ರದಲ್ಲೊಂದು ಮೇಸೆಜ್ ಇದೆ. ಆ ಕಾರಣಕ್ಕೆ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ ರವೀನ್.

Follow Us:
Download App:
  • android
  • ios