’ವಜ್ರಕಾಯ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆ ಫಾಸ್ಟ್ ಡ್ಯಾನ್ಸ್‌ ಮಾಡಿ ಬಿಜಿಲಿ ಪಟ್ಟಾಕಿ ಅಂತಲೇ ಫೇಮಸ್ ಆದ ನಭಾ ಎರಡು ಮೂರು ಚಿತ್ರಗಳ ನಂತರ ಸ್ಯಾಂಡಲ್‌ವುಡ್‌ನಿಂದ ಕಾಣೆಯಾಗಿದ್ದಾರೆ. ಯಾಕೆ ಏನಪ್ಪಾ ವಿಚಾರ ಅಂತೀರಾ? ಇಲ್ಲಿದೆ ಓದಿ.

ಪುರಿ ಜಗನ್ನಾಥ್‌ ನಿರ್ದೇಶನದ ಬಹು ನಿರೀಕ್ಷಿತ್ರ ಚಿತ್ರ 'ಐ ಸ್ಮಾರ್ಟ್‌ ಶಂಕರ್' ಚಿತ್ರದಲ್ಲಿ ನಭಾ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಹಾಡಿನ ಶೂಟಿಂಗ್‌ ನಡೆಯುತ್ತಿದ್ದು ಚಿತ್ರೀಕರಣದ ವೇಳೆ ರಿವೀಲ್‌ ಆದ ಹಾಟ್‌ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು ನಭಾ ಜೊತೆಯಾಗಿ ನಿಧಿ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ.

 

 

ಇನ್ನು ಸ್ಯಾಂಡಲ್‌ವುಡ್‌ ನಿಂದ ಟಾಲಿವುಡ್‌ಗೆ ಹಾರಿದ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್ ಜೋರಾಗಿ ಸದ್ದು ಮಾಡುತ್ತಿದ್ದಾರೆ. ಈಗ ಅದೇ ಸಾಲಿನಲ್ಲಿ ನಭಾ ನಟೇಶ್ ನಿಂತಿದ್ದಾರೆ.