ಸಂಗೀತ ಗಾರುಡಿಗ ಹಂಸಲೇಖ ನಿರ್ದೇಶನದ ಚೊಚ್ಛಲ ಚಿತ್ರ ‘ಶಕುಂತಲೆ’ ಕನ್ನಡದ ಜತೆಗೆ ಹಿಂದಿಯಲ್ಲೂ ನಿರ್ಮಾಣವಾಗುತ್ತಿದೆ. ಬಾಲಿವುಡ್‌ನ  ಬಹುಬೇಡಿಕೆಯ ನಟಿಯೇ ಶಕುಂತಲೆ ಪಾತ್ರಕ್ಕೆ ಬಣ್ಣ ಹುಚ್ಚುತ್ತಿದ್ದಾರೆ.

ಸಂಗೀತ ಗಾರುಡಿಗ ಹಂಸಲೇಖ ನಿರ್ದೇಶನದ ಚೊಚ್ಛಲ ಚಿತ್ರ ‘ಶಕುಂತಲೆ’ ಕನ್ನಡದ ಜತೆಗೆ ಹಿಂದಿಯಲ್ಲೂ ನಿರ್ಮಾಣವಾಗುತ್ತಿದೆ. ಬಾಲಿವುಡ್‌ನ ಬಹುಬೇಡಿಕೆಯ ನಟಿಯೇ ಶಕುಂತಲೆ ಪಾತ್ರಕ್ಕೆ ಬಣ್ಣ ಹುಚ್ಚುತ್ತಿದ್ದಾರೆ. ಇಂಥದೊಂದು
ಸುಳಿವು ಹಂಸಲೇಖ ಅವರಿಂದಲೇ ಸಿಕ್ಕಿದೆ.

ಈಗಾಗಲೇ ಅಂದುಕೊಂಡಂತೆ ಈ ಚಿತ್ರ ಎರಡೂ ಭಾಷೆಗಳಲ್ಲೂ ತೆರೆಗೆ ಬಂದರೆ ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಭಿನ್ನ ಚಿತ್ರವಾಗಿ ಗಮನಸೆಳೆಯುವುದು ಗ್ಯಾರಂಟಿ ಎನ್ನುವ ವಿಶ್ವಾಸ ಹಂಸಲೇಖ ಅವರದ್ದು. ಹಂಸಲೇಖ ಅವರು ಮೊದಲೇ ಹೇಳಿಕೊಂಡಂತೆ ಆಗಿದ್ದರೆ, ಈ ಚಿತ್ರ ಸೆಟ್ಟೇರಿ ಹಲವು ದಿನವೇ ಆಗಬೇಕಿತ್ತು. ಹಂಸಲೇಖ ಅವರ ಪ್ರಕಾರ ಈ ಚಿತ್ರ ತಡವಾಗುವುದಕ್ಕೆ ಗ್ರಾಫಿಕ್ಸ್ ಕೆಲಸವೇ ಕಾರಣ.

ಸದ್ಯಕ್ಕೆ ಚಿತ್ರದ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಮುಗಿಸಿ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ ಹಂಸಲೇಖ. ಅದರ ಪೂರ್ವಭಾವಿಯಾಗಿ ಕಳೆದ ಒಂದು ತಿಂಗಳಿಂದ ಲೊಕೇಷನ್ ಹಂಟಿಂಗ್
ಮುಗಿಸಿಕೊಂಡು ಬಂದಿದ್ದಾರೆ. ಮಡಿಕೇರಿಯ ಏಳು ದೇವರ ಗುಂಡಿ ಸೇರಿದಂತೆ ಸಹ್ಯಾದ್ರಿ ಪರ್ವತ ಶ್ರೇಣಿಯ ಉದ್ದಕ್ಕೂ ಚಿತ್ರೀಕರಣ ನಡೆಸುವ ಯೋಜನೆ
ಹಾಕಿಕೊಂಡಿದ್ದಾರೆ.

ಚಿತ್ರದ ತಾರಾಗಣದಲ್ಲಿ ಯಾರ‌್ಯಾರು ಇದ್ದಾರೆನ್ನುವ ಬಗ್ಗೆ ಹಂಸಲೇಖ ಗುಟ್ಟು ಬಿಟ್ಟುಕೊಡುತ್ತಿಲ್ಲ. ಬಾಲಿವುಡ್‌ನಲ್ಲಿ ಯಾರನ್ನು ಭೇಟಿ ಮಾಡಿದ್ದೀರಿ ಎನ್ನುವ ಪ್ರಶ್ನೆಗೆ ಬಿಗ್ ಸ್ಟಾರ್‌ಗಳನ್ನು ತೋರಿಸುತ್ತಾರೆ. ಈ ಚಿತ್ರದಲ್ಲಿ
ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದೆ.