Asianet Suvarna News Asianet Suvarna News

100 ಕೋಟಿ ಗಳಿಸಿತು ಕುರುಕ್ಷೇತ್ರ;ಕೇಕ್‌ ಕತ್ತರಿಸಿ ಸಂಭ್ರಮಿಸಿದ ದರ್ಶನ್‌!

ದರ್ಶನ್‌ ಅಭಿಮಾನಿ ಬಳಗ ಫುಲ್‌ ಖುಷ್‌ ಆಗಿದೆ. ಬಹುನಿರೀಕ್ಷಿತ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆಯ ಗಳಿಕೆ ಕಂಡಿದೆ. ಒಂದು ಅಂದಾಜಿನ ಪ್ರಕಾರ ಬಾಕ್ಸ್‌ಆಫೀಸ್‌ನಲ್ಲಿ ‘ಕುರುಕ್ಷೇತ್ರ’ ಚಿತ್ರ ಇದುವರೆಗೂ ನೂರು ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ

Munirathna Kurukshetra  hits box office 100 crore Darshan  celebrates with team
Author
Bangalore, First Published Aug 29, 2019, 6:52 AM IST
  • Facebook
  • Twitter
  • Whatsapp

ದರ್ಶನ್‌ ಅಭಿಮಾನಿಗಳ ಬಳಗ ಇದನ್ನು ಅಧಿಕೃವಾಗಿ ಘೋಷಿಸಿಕೊಂಡಿದೆ. ‘ಕುರುಕ್ಷೇತ್ರ’ ಚಿತ್ರ ಬರೊಬ್ಬರಿ . 100 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದೆ. ಆ ಸಂಭ್ರಮಾಚರಣೆಯಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿ ದರ್ಶನ್‌ ಕೂಡ ಭಾಗಿಯಾಗಿದ್ದಾರೆ.

ಇದೊಂದು ಖುಷಿ ವಿಚಾರ. ಅಧಿಕೃತವಾಗಿ ಇದರ ಗಳಿಕೆ ಎಷ್ಟು, ಏನು ಎನ್ನುವುದು ಗೊತ್ತಿಲ್ಲ. ಆದರೆ ಆರಂಭದಿಂದಲೇ ದಾಖಲೆ ಕಲೆಕ್ಷನ್‌ ಆಗುತ್ತಿರುವ ಬಗ್ಗೆ ಮಾಹಿತಿ ಇತ್ತು. ಆಗಾಗ ನಿರ್ಮಾಪಕರು ಸಿಕ್ಕಾಗಲೂ ಹೇಳುತ್ತಿದ್ದರು. ಈಗ ನಮ್ಮ ಚಿತ್ರ 100 ಕೋಟಿ ರೂ. ಗಳಿಕೆ ಕಂಡು ದಾಖಲೆ ಸೃಷ್ಟಿಸಿದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಅದರ ಜತೆಗೆ ಕನ್ನಡ ಚಿತ್ರರಂಗಕ್ಕೂ ಖುಷಿ ಕೊಡುವಂತಹ ಸಂಗತಿ.- ನಾಗಣ್ಣ, ನಿರ್ದೇಶಕ

ದರ್ಶನ್‌ ಪಾಲಿಗೆ ಇದೊಂದು ವಿಶೇಷವಾದ ಸಿನಿಮಾ. ಅವರ ಸಿನಿ ಕರಿಯರ್‌ನಲ್ಲಿ ಇದು ನಾಯಕನಟರಾಗಿ 50ನೇ ಚಿತ್ರ. ಅದ್ಧೂರಿ ವೆಚ್ಚದ ಪೌರಾಣಿಕ ಚಿತ್ರವೆಂದೇ ಕರೆಸಿಕೊಂಡಿದ್ದ ಈ ಚಿತ್ರ ಬಿಡುಗಡೆ ಆಗಿ 3ನೇ ವಾರ ಪೂರೈಸುತ್ತಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಎಲ್ಲಾ ಕಡೆಗಳಲ್ಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನದ ಗಳಿಕೆಯೇ 13 ಕೋಟಿ ರೂ. ಎನ್ನುವ ಸುದ್ದಿ ಇತ್ತು.

ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ ಗಳಿಕೆಯೂ ಹೌದು. ಎರಡನೇ ದಿನ 10 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಅಲ್ಲಿಂದ ಸದ್ದಿಲ್ಲದೆ ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿ 3 ವಾರದ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರದ ಇದುವರೆಗಿನ ಒಟ್ಟು ಕಲೆಕ್ಷನ್‌ 100 ಕೋಟಿ ರೂ. ಎನ್ನುವುದು ದರ್ಶನ್‌ ಅಭಿಮಾನಿ ಬಳಗದ ಘೋಷಣೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲದಲ್ಲಿ ವೈರಲ್‌ ಆದ ‘ಕುರುಕ್ಷೇತ್ರ’ದ 100 ಕೋಟಿ ಗಳಿಕೆಯ ಸಂಭ್ರಮಾಚರಣೆಯ ಫೋಟೋಗಳು.

ನಿಜ ನಾನು ಈ ಸಿನಿಮಾದ ವಿತರಕ. ಆದರೆ ನಾನು ಯಾವುದೇ ಸಿನಿಮಾ ಬಜೆಟ್‌ ಆಗಲಿ, ಇಲ್ಲವೇ ಅದರ ಕಲೆಕ್ಷನ್‌ ವಿಚಾರದಲ್ಲಾಗಲಿ ಮಾತನಾಡಿಲ್ಲ. ಅದು ನನ್ನ ಅಭ್ಯಾಸ. ಈಗಲೂ ಅಷ್ಟೇ. ಅಧಿಕೃತವಾಗಿ ಎಲ್ಲವನ್ನು ನೋಡಿ, ಪರಿಶೀಲಿಸಿದ ನಂತರ ಎಷ್ಟು, ಏನು ಅನ್ನೋದು ಗೊತ್ತಾಗುತ್ತೆ. ಅದು ಬಿಟ್ಟರೆ, ಈಗಿನ ಯಾವುದೇ ಸುದ್ದಿ ಬಗ್ಗೆ ನಾನು ಕಮೆಂಟ್‌ ಮಾಡುವುದಿಲ್ಲ.- ರಾಕ್‌ಲೈನ್‌ ವೆಂಕಟೇಶ್‌, ಕುರುಕ್ಷೇತ್ರ ಚಿತ್ರದ ವಿತರಕ

ಕುರುಕ್ಷೇತ್ರ ದ 100 ಕೋಟಿ ರೂ. ಗಳಿಕೆಯ ಸಂಭ್ರಮಾಚರಣೆ ಮಾಡಿದ್ದು ದರ್ಶನ್‌ ಅಭಿಮಾನಿ ಬಳಗ. ಅಲ್ಲಿ ದರ್ಶನ್‌ ಮಾತ್ರವೇ ಇದ್ದು ವಿಶೇಷ ಕೇಕ್‌ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

"

Follow Us:
Download App:
  • android
  • ios