ವಾಷಿಂಗ್ಟನ್‌[ಜು.28]: ಅಮೆರಿಕ ಗಾಟ್‌ ಟ್ಯಾಲೆಂಟ್‌ ಶೋನಲ್ಲಿ ಮುಂಬೈ ಮೂಲದ ‘ಡ್ಯಾನ್ಸ್‌ ಗ್ರೂಪ್‌- ವಿ’ ಅಜೇಯವಾಗಿ ಉಳಿದ್ದಿದ್ದು, ಸಾಹಸಮಯ ಹೆಜ್ಜೆಯ ಮೂಲಕ ಪ್ರತಿಸಲದ ಪ್ರದರ್ಶನಕ್ಕೂ ಗೋಲ್ಡನ್‌ ಬಜ್ಹರ್‌ ಪಡೆದುಕೊಳ್ಳುತ್ತಿದೆ.

ಅಮೆರಿಕ ಗಾಟ್‌ ಟ್ಯಾಲೆಂಟ್‌ ಸ್ಪರ್ಧೆಗೆ ಆಯ್ಕೆ ಆದ ಬಳಿಕ, ಎಲಿಮಿನೇಶನ್‌ ರೌಂಡ್‌ನಲ್ಲೂ ತೀರ್ಪುಗಾರರನ್ನು ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ತಂಡ ಇದೀಗ ಹಾಲಿವುಡ್‌ನಲ್ಲಿ ನೇರ ಪ್ರಸಾರದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಶೋ ಆಗಸ್ಟ್‌ನಲ್ಲಿ ನಡೆಯಲಿದೆ.

ಇದೇ ವೇಳೆ ತಮ್ಮ ಯಶಸ್ಸಿನ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿರುವ ತಂಡದ ಸದಸ್ಯರು, ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮಗೆ ಸ್ಫೂರ್ತಿಯಾಗಿದ್ದಾರೆ. ನಾವು ರಣವೀರ್‌ ಸಿಂಗ್‌ ಅವರ ಹಾಡಿಗೆ ಡ್ಯಾನ್ಸ್‌ ಮಾಡಿದಾಗಲೆಲ್ಲಾ ನಮ್ಮ ಪ್ರದರ್ಶನ ಸೂಪರ್‌ ಹಿಟ್‌ ಆಗಿದೆ ಎಂದು ಹೇಳಿದ್ದಾರೆ.