ಚಿತ್ರದಲ್ಲಿ ದೇವರನ್ನ ಬೈಯುವ ನಾಸ್ತಿಕ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರ ಪೂರ್ತಿ ಆವರಿಸಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ರಿಯಲ್ ಸ್ಟಾರ್ ನಾಲಿಗೆಗೆ ಫಿಲ್ಟರ್ ಇಲ್ಲದೆ ಹೊಡೆಯುವ ಪಂಚಿಂಗ್ ಡೈಲಾಗ್`ಗಳು ಚಿತ್ರದ ಹೈಲೆಟ್ಸ್. ಇನ್ನೂ, ಲಾರ್ಡ್ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್, ಬಿರುದಿಗೆ ತಕ್ಕಂತೆ ಅಭಿನಯ ಚಕ್ರವರ್ತಿ. ಈ ಚಿತ್ರದ ಮತ್ತೊಂದು ಹೈಲೆಟ್ಸ್ ಅಂದರೆ ದೇವಲೋಕದಿಂದ ಭೂಲೋಕಕ್ಕೆ ಸುದೀಪ್ ಎಂಟ್ರಿಕೊಡುವ ಸೀನ್ ಕಿಚ್ಚ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ.
ಬೆಂಗಳೂರು(ಅ.28): ಸ್ಯಾಂಡಲ್ ವುಡ್ ಜೊತೆಗೆ ಉಪೇಂದ್ರ ಹಾಗೂ ಸುದೀಪ್ ಅಭಿಮಾನಿಗಳು ಎದುರು ನೋಡುತ್ತಿದ್ದ ಮುಕುಂದ- ಮುರಾರಿ ಚಿತ್ರಕ್ಕೆ ಸಿನಿಪ್ರಿಯರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಗಟ್ಟಿತನದ ಕಥೆ, ಆಧ್ಯಾತ್ಮಿಕ ಆಚರಣೆಗಳು ಹಾಗೂ ಗಂಭೀರ ಪ್ರಶ್ನೆಗಳಿಗೆ ಉತ್ತರ ಹುಡುಕುವ ಚಿತ್ರವೇ ಮುಕುಂದ ಮುರಾರಿ.
ದೇವರನ್ನ ಧರೆಗಿಳಿಸಿದ ರಿಯಲ್ ಸ್ಟಾರ್ : ಚಿತ್ರದಲ್ಲಿ ದೇವರನ್ನ ಬೈಯುವ ನಾಸ್ತಿಕ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರ ಪೂರ್ತಿ ಆವರಿಸಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ರಿಯಲ್ ಸ್ಟಾರ್ ನಾಲಿಗೆಗೆ ಫಿಲ್ಟರ್ ಇಲ್ಲದೆ ಹೊಡೆಯುವ ಪಂಚಿಂಗ್ ಡೈಲಾಗ್`ಗಳು ಚಿತ್ರದ ಹೈಲೆಟ್ಸ್. ಇನ್ನೂ, ಲಾರ್ಡ್ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್, ಬಿರುದಿಗೆ ತಕ್ಕಂತೆ ಅಭಿನಯ ಚಕ್ರವರ್ತಿ. ಈ ಚಿತ್ರದ ಮತ್ತೊಂದು ಹೈಲೆಟ್ಸ್ ಅಂದರೆ ದೇವಲೋಕದಿಂದ ಭೂಲೋಕಕ್ಕೆ ಸುದೀಪ್ ಎಂಟ್ರಿಕೊಡುವ ಸೀನ್ ಕಿಚ್ಚ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ.
ಉಳಿದಂತೆ ಉಪ್ಪಿ ಪತ್ನಿಯಾಗಿ ನಿಖಿತಾ ತುಕ್ರಾಲ್ ಕಾಣಿಸಿಕೊಂಡಿದ್ದರೆ, ಸ್ವಾಮಿಜೀಗಳಾಗಿ ಖಳ ನಟ ರವಿಶಂಕರ್, ಅವಿನಾಶ್ ನಟನೆ ಸೂಪರ್. ತಬಲ ನಾಣಿ, ಬುಲೆಟ್ ಪ್ರಕಾಶ್, ದೇವರಾಜ್, ಪ್ರಕಾಶ್ ಬೆಳವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿಂದಿಯ ಓ ಮೈ ಗಾಡ್ ಚಿತ್ರ ರಿಮೇಕ್ ಆಗಿರುವ ಮುಕುಂದ ಮುರಾರಿ ಚಿತ್ರವನ್ನ ನಿರ್ದೇಶಕ ನಂದ ಕಿಶೋರ್ ಕನ್ನಡದ ನೇಟಿವಿಟಿಗೆ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಬಹಳ ಅದ್ದೂರಿಯಾಗಿ ನಿರ್ಮಾಪಕರಾದ ಎಂ ಎನ್ ಕುಮಾರ್ ಹಾಗು ಜಯಶ್ರೀದೇವಿ ನಿರ್ಮಾಣ ಮಾಡಿದ್ದಾರೆ.
ಒಟ್ಟಿನಲ್ಲಿ, ಮುಕುಂದ ಮುರಾರಿ ಫ್ಯಾಮಿಲಿ ಸಮೇತ ನೋಡಬಹುದಾದ ಚಿತ್ರವಾಗಿದೆ.
