ಛಾಯಾಗ್ರಹಣ: ವೆಂಕಟೇಶ್‌ ಅಂಗುರಾಜ್‌ ಚಿಕ್ಕಂದಿನಲ್ಲಿ ನಾವು ಕೇಳುತ್ತಿದ್ದ ಕತೆಯೊಂದು ಹೀಗೆ ಸಾಗುತ್ತದೆ: ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ತನ್ನ ರಾಜ್ಯ, ಪ್ರಜೆಗಳೆಂದರೆ ಪಂಚ­ಪ್ರಾಣ. ಸಾಮಾನ್ಯ ಜನರ ನೆಮ್ಮದಿಯೇ ತನ್ನ ಜೀವನದ ಪರಮ ಗುರಿ. ಪ್ರಜೆಗಳೂ ರಾಜನನ್ನು ದೇವರೆಂದು ಪೂಜಿಸುತ್ತಾರೆ. ಆದರೆ ರಾಜನ ಈ ಔದಾರ್ಯವನ್ನು ಸಹಿಸದ ಆತನ ಮಂತ್ರಿ ಕುತಂತ್ರ ಮಾಡಿ ರಾಜನನ್ನು ಸಾಯಿಸುತ್ತಾನೆ. ಆದರೆ ರಾಜನ ಕನಸು ಸಾಯುವುದಿಲ್ಲ. ಅಪ್ಪನ ಅದರ್ಶಗಳನ್ನೆಲ್ಲ ಮೈಗೂಡಿಸಿಕೊಂಡ ಪುಟ್ಟರಾಜಕುಮಾರ ಬರುತ್ತಾನೆ. ಅಪ್ಪನ ಪರೋಪಕಾರವನ್ನು ಮುಂದುವರೆಸುತ್ತಾನೆ. ದೇವರಂಥ ರಾಜನನ್ನು ಕೊಂದವರನ್ನೂ ಶಿಕ್ಷಿಸುತ್ತಾನೆ. ಮಗನ ಕರ್ತವ್ಯ, ಅಪ್ಪನ ಕನಸುಗಳನ್ನು ಈಡೇರಿಸುತ್ತದೆ. ಕತೆ ಅಲ್ಲಿಗೆ ಮುಗಿಯುತ್ತದೆ. ರಾಜ, ಮಂತ್ರಿ, ಪ್ರಜೆ­ಗಳು, ರಾಜನ ಮಗ... ಈ ನಾಲ್ಕು ಪಾತ್ರಗಳಲ್ಲಿ ಎಷ್ಟೊಂದು ಮೌಲ್ಯಗಳಿವೆ, ಅದರ್ಶ­ಗಳಿವೆ ಎಂಬು­ದನ್ನು ಪ್ರತ್ಯೇಕವಾಗಿ ಹೇಳಬೇ­ಕಿಲ್ಲ. ಈ ಕಾಲ್ಪನಿಕ ಕತೆಗೆ ಈಗ ರಾಜನಾಗಿ ಶರತ್‌ಕುಮಾರ್‌, ಮಂತ್ರಿ­ಯಾಗಿ ಪ್ರಕಾಶ್‌ ರೈ, ರಾಜನ ಮಗನಾಗಿ ಪುನೀತ್‌ರಾಜ್‌ಕುಮಾರ್‌, ಪ್ರೇಕ್ಷಕರ ಪಾತ್ರದಲ್ಲಿ ಪೊಲೀಯೋ ಲಸಿಕೆ ಹಗರಣದಲ್ಲಿ ಸತ್ತ ಮಕ್ಕಳು, ಅವರ ಪೋಷಕರನ್ನು ನಿಲ್ಲಿಸಿದರೆ ಹೇಗಿತ್ತದೆ? ಕುತೂಹಲ ಇದ್ದವರು ‘ರಾಜಕುಮಾರ' ಸಿನಿಮಾ ನೋಡಬಹುದು.
ಚಿತ್ರ: ರಾಜಕುಮಾರ ತಾರಾಗಣ: ಪುನೀತ್ರಾಜ್ಕುಮಾರ್, ಪ್ರಿಯಾ ಆನಂದ್, ಶರತ್ ಕುಮಾರ್, ವಿಜಯ್ ಲಕ್ಷ್ಮಿಸಿಂಗ್, ರಂಗಾಯಣ ರಘು, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ, ಅಶೋಕ್, ಅವಿನಾಶ್, ದತ್ತಣ್ಣ
ನಿರ್ದೇಶನ: ಸಂತೋಷ್ ಆನಂದ್ರಾಮ್
ನಿರ್ಮಾಣ: ವಿಜಯ್ ಕಿರಗಂದೂರು
ಸಂಗೀತ: ವಿ ಹರಿಕೃಷ್ಣ
ಛಾಯಾಗ್ರಹಣ: ವೆಂಕಟೇಶ್ ಅಂಗುರಾಜ್ ಚಿಕ್ಕಂದಿನಲ್ಲಿ ನಾವು ಕೇಳುತ್ತಿದ್ದ ಕತೆಯೊಂದು ಹೀಗೆ ಸಾಗುತ್ತದೆ: ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ತನ್ನ ರಾಜ್ಯ, ಪ್ರಜೆಗಳೆಂದರೆ ಪಂಚಪ್ರಾಣ. ಸಾಮಾನ್ಯ ಜನರ ನೆಮ್ಮದಿಯೇ ತನ್ನ ಜೀವನದ ಪರಮ ಗುರಿ. ಪ್ರಜೆಗಳೂ ರಾಜನನ್ನು ದೇವರೆಂದು ಪೂಜಿಸುತ್ತಾರೆ. ಆದರೆ ರಾಜನ ಈ ಔದಾರ್ಯವನ್ನು ಸಹಿಸದ ಆತನ ಮಂತ್ರಿ ಕುತಂತ್ರ ಮಾಡಿ ರಾಜನನ್ನು ಸಾಯಿಸುತ್ತಾನೆ. ಆದರೆ ರಾಜನ ಕನಸು ಸಾಯುವುದಿಲ್ಲ. ಅಪ್ಪನ ಅದರ್ಶಗಳನ್ನೆಲ್ಲ ಮೈಗೂಡಿಸಿಕೊಂಡ ಪುಟ್ಟರಾಜಕುಮಾರ ಬರುತ್ತಾನೆ. ಅಪ್ಪನ ಪರೋಪಕಾರವನ್ನು ಮುಂದುವರೆಸುತ್ತಾನೆ. ದೇವರಂಥ ರಾಜನನ್ನು ಕೊಂದವರನ್ನೂ ಶಿಕ್ಷಿಸುತ್ತಾನೆ. ಮಗನ ಕರ್ತವ್ಯ, ಅಪ್ಪನ ಕನಸುಗಳನ್ನು ಈಡೇರಿಸುತ್ತದೆ. ಕತೆ ಅಲ್ಲಿಗೆ ಮುಗಿಯುತ್ತದೆ. ರಾಜ, ಮಂತ್ರಿ, ಪ್ರಜೆಗಳು, ರಾಜನ ಮಗ... ಈ ನಾಲ್ಕು ಪಾತ್ರಗಳಲ್ಲಿ ಎಷ್ಟೊಂದು ಮೌಲ್ಯಗಳಿವೆ, ಅದರ್ಶಗಳಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಕಾಲ್ಪನಿಕ ಕತೆಗೆ ಈಗ ರಾಜನಾಗಿ ಶರತ್ಕುಮಾರ್, ಮಂತ್ರಿಯಾಗಿ ಪ್ರಕಾಶ್ ರೈ, ರಾಜನ ಮಗನಾಗಿ ಪುನೀತ್ರಾಜ್ಕುಮಾರ್, ಪ್ರೇಕ್ಷಕರ ಪಾತ್ರದಲ್ಲಿ ಪೊಲೀಯೋ ಲಸಿಕೆ ಹಗರಣದಲ್ಲಿ ಸತ್ತ ಮಕ್ಕಳು, ಅವರ ಪೋಷಕರನ್ನು ನಿಲ್ಲಿಸಿದರೆ ಹೇಗಿತ್ತದೆ? ಕುತೂಹಲ ಇದ್ದವರು ‘ರಾಜಕುಮಾರ' ಸಿನಿಮಾ ನೋಡಬಹುದು.
-ಆರ್. ಕೇಶವಮೂರ್ತಿ, ಕನ್ನಡ ಪ್ರಭ
