ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಸಿನಿಮಾದ ಟೈಟಲ್ ವಿವಾದಕ್ಕೀಡಾಗಿದೆ. ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಈಗಾಗಲೇ  ಲೀಡರ್ ಹೆಸರಿನಲ್ಲಿಯೇ ಸಿನಿಮಾದ ಚಿತ್ರೀಕರಣ ಆರಂಭಿಸಿದದು, ಟ್ರೈಲರ್ ಕೂಡ ಹೊರ ಬಿದ್ದಿದೆ. ಇನ್ನೇನೂ ಚಿತ್ರ ರಿಲೀಸ್'ಗೆ ಸಜ್ಜಾಗುತ್ತಿದೆ. ಆದರೆ, ಚಿತ್ರದ ಟೈಟಲ್ ಇನ್ನೂ ನಿರ್ದೇಶಕ ಎ.ಎಂ.ಆರ್.ರಮೇಶ್ ಬಳಿಯೇ ಇದೆ. ಅದನ್ನು ಎ.ಎಂ.ಆರ್. ರಮೇಶ್ ಯಾರಿಗೂ ಕೊಟ್ಟಿಲ್ಲ.

ಬೆಂಗಳೂರು(ಎ.06): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಸಿನಿಮಾದ ಟೈಟಲ್ ವಿವಾದಕ್ಕೀಡಾಗಿದೆ. ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಈಗಾಗಲೇ ಲೀಡರ್ ಹೆಸರಿನಲ್ಲಿಯೇ ಸಿನಿಮಾದ ಚಿತ್ರೀಕರಣ ಆರಂಭಿಸಿದದು, ಟ್ರೈಲರ್ ಕೂಡ ಹೊರ ಬಿದ್ದಿದೆ. ಇನ್ನೇನೂ ಚಿತ್ರ ರಿಲೀಸ್'ಗೆ ಸಜ್ಜಾಗುತ್ತಿದೆ. ಆದರೆ, ಚಿತ್ರದ ಟೈಟಲ್ ಇನ್ನೂ ನಿರ್ದೇಶಕ ಎ.ಎಂ.ಆರ್.ರಮೇಶ್ ಬಳಿಯೇ ಇದೆ. ಅದನ್ನು ಎ.ಎಂ.ಆರ್. ರಮೇಶ್ ಯಾರಿಗೂ ಕೊಟ್ಟಿಲ್ಲ.

ಕಳೆದ 7 ವರ್ಷದಿಂದ ಶೀರ್ಷಿಕೆಯನ್ನ ರಿನಿವಲ್ ಮಾಡಿಸುತ್ತಲೇ ಬಂದಿದ್ದಾರೆ. ಫಿಲ್ಮಂ ಚೇಂಬರ್ ಕೂಡ ಲೀಡರ್ ಶೀರ್ಷಿಕೆಯನ್ನ ಬೇರೆ ಯಾರೂ ಬಳಸಬಾರದು ಅಂತಲೂ ಹೇಳಿದೆ. ಗೌರವ ಕಾರ್ಯದರ್ಶಿ ಎಂ.ಜಿ.ರಾಮಮೂರ್ತಿ ಹಸ್ತಾಕ್ಷರ ಇರೋ ಚೇಂಬರ್ ಲೆಟರ್ ಹೆಡ್ ಮೇಲೇನೆ ಈ ವಿಚಾರ ಸ್ಪಷ್ಠವಾಗಿ ತಿಳಿಸಿದ್ದಾರೆ. ಆದರೆ, ತರುಣ್ ಹೇಳುವಂತೆ ತಮ್ಮದು ಮಾಸ್ ಲೀಡರ್ ಅಂತಹ ಶೀರ್ಷೀಕೆ. ಲೀಡರ್ ಅಲ್ಲವೇ ಅಲ್ಲ ಅಂತಾರೆ.

ಆದರೆ, ಈಗ ಎ.ಎಂ.ಆರ್. ರಮೇಶ್ ಟೈಟಲ್ ಗಾಗಿಯೇ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಫಿಲ್ಮಂ ಚೇಂಬರ್​ನ ಏಕಪಕ್ಷೀಯ ನಡೆಯನ್ನ ವಿರೋಧಿಸಿ ಇದೇ ಏಪ್ರೀಲ್​ -10 ರಂದು ಫಿಲ್ಮಂ ಚೇಂಬರ್​ ಮುಂದೆ ಧರಣಿ ನಡೆಸೋಕೆ ಮುಂದಾಗಿದ್ದಾರೆ.