ಕಬಾಲಿ ನಿರ್ದೇಶಕನ ಚಿತ್ರದಲ್ಲಿ ಜಿಗ್ನೇಶ್ ಮೇವಾನಿ ನಟನೆ

First Published 27, Jan 2018, 8:42 AM IST
MLA Jignesh Mewani to act in Ranjiths movie
Highlights

ದಲಿತ ಮುಖಂಡ, ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಶೀಘ್ರವೇ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಹಮದಾಬಾದ್: ದಲಿತ ಮುಖಂಡ, ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಶೀಘ್ರವೇ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇವಾನಿ ಅವರ ದಲಿತ ಹೋರಾಟದಿಂದ ಪ್ರಭಾವಿತರಾದ ತಮಿಳು ನಿರ್ದೇಶಕ ಪಾ.ರಂಜಿತ್, ಶಾಸಕರನ್ನು ಭೇಟಿ ಮಾಡಿ ಚಿತ್ರದಲ್ಲಿ ಅಭಿನಯಿಸಲು ಕೇಳಿಕೊಂಡಿದ್ದಾರೆ.

ದಲಿತ ಹಕ್ಕುಗಳು ಮತ್ತು ಈಗ ನಡೆಯುತ್ತಿರುವ ಚಳವಳಿಗಳು ಸೇರಿ ಹಲವು ವಿಷಯಗಳ ಬಗ್ಗೆ ಮೇವಾನಿ ಅವರ ಬಳಿ ಚರ್ಚಿಸಿದ್ದೇನೆ. ಅವರ ವ್ಯಕ್ತಿತ್ವಕ್ಕೆ ಸೂಕ್ತ ಪಾತ್ರ ನೀಡಲಾಗುವುದು ಎಂದು ರಂಜಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಜನೀಕಾಂತ್ ಅಭಿನಯದ ಕಬಾಲಿ ಚಿತ್ರವನ್ನು ನಿರ್ಮಿಸಿದ್ದು ರಂಜಿತ್.

loader