ಮಹಿಳೆಯರನ್ನ ಬಳಸಿಕೊಳ್ಳುತ್ತಿರುವ ವಿಚಾರವನ್ನು ಸಮಾಜ ಒಪ್ಪುವುದಿಲ್ಲ. ಇದು ಅನಾಗರಿಕತೆಯ ಪರಮಾವಧಿ. ಇದನ್ನ ನಾವು ಯಾರೂ ಒಪ್ಪುವುದಕ್ಕೆ ಸಾಧ್ಯ ಇಲ್ಲ. ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಬರಬೇಕಾದರೆ ಅನೇಕ ಅಡೆತಡೆ ಮತ್ತು ಸವಾಲು ಇದೆ. ಸವಾಲು, ಒತ್ತಡ ಮೀರಿ ಬರಬೇಕು.
ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಚ್ಚಿಟ್ಟ ಕನ್ನಡ ಚಿತ್ರರಂಗದ (Kannada Film Industry) ಕಾಸ್ಟಿಂಗ್ ಕೌಚ್ (Casting Couch) ಪ್ರಕರಣ ಸಂಬಂಧಿಸಿ ಸುವರ್ಣ ನ್ಯೂಸ್‌ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ ನಾನು ಚಾನೆಲ್ ನೋಡಿದೆ. ನಿಜವಾಗಲೂ ನನಗೆ ಇದನ್ನು ನೋಡಿದಾಗ ದುರದೃಷ್ಟಕರ ಅನ್ನಿಸ್ತು. ರಾಜಾರೋಷವಾಗಿ ಒಬ್ಬ ಡೈರೆಕ್ಟರ್ ಕುಳಿತು ಮಾತನಾಡ್ತಾರೆ. ಇಬ್ಬರು ಮಹಿಳೆಯರು ಬರ್ತಾರೆ, ಈ ರೀತಿ ಆಗಬಾರದು. ಇದರಿಂದ ಬಹಳ ಒಳ್ಳೆಯ ಸಂದರ್ಭದಲ್ಲಿ ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತೆ. ಇದನ್ನ ನಾನು ಖಂಡಿತವಾಗ್ಲೂ ಕಾನೂನು ಸಚಿವರು ಮತ್ತು ಗೃಹ ಸಚಿವರ ಗಮನಕ್ಕೆ ತರ್ತೇನೆ.
ನಾನಂತೂ ಈ ವಿಚಾರವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಕಾನೂನು ಸಚಿವರು ಹಾಗೂ ಗೃಹ ಸಚಿವರ ಹತ್ತಿರ ಮಾತನಾಡುತ್ತೇನೆ. ಇಂಥ ವಿಚಾರವನ್ನು ಬೆಳಕಿಗೆ ತಂದ ಸುವರ್ಣ ನ್ಯೂಸ್ ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಾಣಿಜ್ಯ ಮಂಡಳಿ ಏನ್ ತೀರ್ಮಾನ ಮಾಡ್ತಾರೆ ಅದು ಅವರಿಗೆ ಬಿಟ್ಟ ವಿಚಾರ. ನನ್ನ ಜವಾಬ್ದಾರಿ ಕಾನೂನು ಸಚಿವರು ಗೃಹ ಸಚಿವರ ಗಮನಕ್ಕೆ ತರುವುದು. ಮಹಿಳೆಯರನ್ನ ಬಳಸಿಕೊಳ್ಳುವುದು, ಈ ಪದ ಬಳಸ್ತಿರೋದಕ್ಕೆ ಕ್ಷಮೆ ಇರಲಿ.
ಮಹಿಳೆಯರನ್ನ ಬಳಸಿಕೊಳ್ಳುತ್ತಿರುವ ವಿಚಾರ ಇದನ್ನ ಸಮಾಜ ಒಪ್ಪುವುದಿಲ್ಲ. ಇದು ಅನಾಗರಿಕತೆಯ ಪರಮಾವಧಿ.
ಇದನ್ನ ನಾವು ಯಾರೂ ಒಪ್ಪುವುದಕ್ಕೆ ಸಾಧ್ಯ ಇಲ್ಲ. ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಬರಬೇಕಾದರೆ ಅನೇಕ ಅಡೆತಡೆ ಮತ್ತು ಸವಾಲು ಇದೆ. ಸವಾಲು, ಒತ್ತಡ ಮೀರಿ ಬರಬೇಕು. ಸವಾಲು ದಾಟುವ ಸಮಯದಲ್ಲಿ ಒತ್ತಡಕ್ಕೆ ಒಳಗಾಗಬಾರದು
'ಯಾರು ಒತ್ತಡಕ್ಕೆ ಮಣಿಯುತ್ತಾರೋ ಅವರು ಜೀವನದಲ್ಲಿ ಸೋಲ್ತಾರೆ. ಆ ಕ್ಷಣಕ್ಕೆ ಮಣಿಯದೇ ಇದ್ದಾಗ ಕಷ್ಟ ಆಗಬಹುದು. ಆದರೆ ಮುಂದೆ ಗೆಲುವು ನಮ್ಮದಾಗಬಹುದು. ಸಿನಿಮಾರಂಗಕ್ಕೆ ಬರುವವರಿಗೆ ಹೀಗೆಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಲಹೆ ನೀಡಿದ್ದಾರೆ.
ಇನ್ನು ಈ ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಸಂಬಂಧಿಸಿ ಫಿಲಂ ಚೇಂಬರ್ ಬಳಿ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಹೇಳಿಕೆ ನೀಡಿದ್ದಾರೆ. 'ಇಂತಹ ಘಟನೆ ಆಗಬಾರದಿತ್ತು. ನಾನು ನಿಮ್ಮ ಚಾನಲ್ ಮೂಲಕ ನೋಡಿದ್ದೇನೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಡೈರೆಕ್ಟರ್ ಈ ಮಟ್ಟಕ್ಕೆ ಇಳಿಯಬಾರದು. ಪಾಶ್ ಕಮಿಟಿಗೆ ದೂರು ಬಂದ್ರೆ ಕ್ರಮವಾಗುತ್ತೆ. ಕನ್ನಡ ಇಂಡಸ್ಟ್ರೀಸ್ ಇಂತಹ ಕೆಲವರಿಂದ ಕೆಟ್ಟ ಹೆಸರು ಬರುತ್ತಿದೆ. ಎಲ್ಲರನ್ನು ದೂಷಿಸಲಿಕ್ಕೆ ಆಗಲ್ಲ.ಎಲ್ಲೋ ಅಲ್ಲಿ ಇಲ್ಲಿ ಒಬ್ಬರು ಇಂತಹವರು ಇರುತ್ತಾರೆ..' ಎಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಕಾಸ್ಟಿಂಗ್ ಕೌಚ್ ಕರಾಳ ದಂಧೆ ಬಹಿರಂಗ ಆಗುತ್ತಿದ್ದಂತೆ, ಸಿನಿಮಾ ಲೋಕ, ಪ್ರೇಕ್ಷಕ ವರ್ಗ ಸೇರಿದಂತೆ ಇಡೀ ಕರ್ನಾಟಕದ ತುಂಬೆಲ್ಲಾ ಸಂಚಲನ್ ಸೃಷ್ಟಿಯಾಗಿದೆ. ಇದೀಗ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಬಹಳಷ್ಟು ಅಭಿಪ್ರಾಯಗಳು ಈ ದಂಧೆಯ ವಿರೋಧಿಸಿ ಬರತೊಡಗಿದೆ. ಯಾರಾದರೂ ದೂರು ದಾಖಲಿಸಿದರೆ, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿಕೆ ನೀಡಿದೆ.
ಇನ್ನು, ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ವಿಚಾರ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ನೀಡಿದ್ದಾರೆ. 'ಇದು ಮಾನವೀಯ ನಡೆ ಅಲ್ಲ. ಸಿನಿಮಾದಲ್ಲಿ ಎಲ್ಲಾ ಕತೆ ಬರೆದು ಸಮಾಜಕ್ಕೆ ತೋರಿಸಿ ನೀತಿ ಹೇಳೊರ ನೀತಿ ಸರಿ ಇರಬೇಕು... ಇಲ್ಲವಾದರೆ ನೀವು ಅಪಹಾಸ್ಯಕ್ಕೆ ಒಳಗಾಗುತ್ತೀರಿ. ಜನರು ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ. ಕನ್ನಡ ಇರಬಹುದು, ತಮಿಳು ಇರಬಹುದು ಯಾವುದೇ ಇಂಡಸ್ಟ್ರಿ ಇರಲಿ ಅದು ಮುಖ್ಯವಲ್ಲ.
ಕನ್ನಡದಲ್ಲಿ ಕಡಿಮೆ ಇದ್ದವು. ಆದರೆ ಇತ್ತಿಚೆಗೆ ಜಾಸ್ತಿ ಕೇಳುತ್ತಿದ್ದೇವೆ. ಫಿಲ್ಮ್ ಚೆಂಬರ್ ಕೂಡ ಇದನ್ನು ಗಮನಿಸಬೇಕು. ಈ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾದಾಗಾ ನಮ್ಮ ಕನ್ನಡ ಇಂಡಸ್ಟ್ರಿ ಕಡೆ ಜನ ಗೌರವ ನೀಡುತ್ತಾರೆ. ಸ್ಯಾಂಡಲ್‌ವುಡ್ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ಮಾಡಿದೆ' ಎಂದಿದ್ದಾರೆ.
