ಇದೇ ನನ್ನ ರೂಮ್, ಬೆಡ್ ಎನ್ನುತಾ ಪೂಲ್ನಲ್ಲಿ ಹಾಟ್ ಅವತಾರ ತಾಳಿದ ಖ್ಯಾತ ನಟಿ
ಹಿಂದಿಯ ಖ್ಯಾತ ಟಿವಿ ನಟಿ ಹಿನಾ ಖಾನ್ ಮತ್ತೆ ಹಾಟ್ ಅವತಾರದ ಮೂಲಕ ಪಡ್ಡೆಯುವಕರ ನಿದ್ದೆ ಗೆಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ನಟಿ ಹಿನಾ ಖಾನ್ ಇದೀಗ ಮತ್ತಷ್ಟು ಬೋಲ್ಡ್ ಫೋಟೋ ಶೇರ್ ಮಾಡಿದ್ದಾರೆ.
ಹಿಂದಿಯ ಖ್ಯಾತ ಟಿವಿ ನಟಿ ಹಿನಾ ಖಾನ್ ಮತ್ತೆ ಹಾಟ್ ಅವತಾರದ ಮೂಲಕ ಪಡ್ಡೆಯುವಕರ ನಿದ್ದೆ ಗೆಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ನಟಿ ಹಿನಾ ಖಾನ್ ಇದೀಗ ಮತ್ತಷ್ಟು ಬೋಲ್ಡ್ ಫೋಟೋ ಶೇರ್ ಮಾಡಿದ್ದಾರೆ.
ಹಿನಾ ಖಾನ್ ಬೋಲ್ಡ್ ಅವತಾರ ತಾಳಿರುವ ಫೋಟೋಗಳನ್ನು ಶೇರ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೋದಲು ಅನೇಕ ಬಾರಿ ಬಿಕಿನಿ ಧರಿಸಿ ಮಸ್ತ್ ಪೋಸ್ ನೀಡಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅಂದಹಾಗೆ ಸೆಲೆಬ್ರಿಟಿಗಳು ಬಿಕಿನಿ ಧರಿಸಿ ಬೀಚ್ನಲ್ಲಿ ಕುಳಿತು ಪೋಸ್ ನೀಡಿದ್ದಾರೆ ಎಂದರೆ ಅದು ಮಾಲ್ಡೀವ್ಸ್ ಟ್ರಿಪ್ ಆಗಿರುತ್ತದೆ ಎನ್ನುವುದು ಥಟ್ ಅಂತ ಗೊತ್ತಾಗಲಿದೆ. ಸದ್ಯ ಹಾಟ್ ಆಗಿರುವುದು ಸಹ ಮಾಲ್ಡೀವ್ಸ್ ನಲ್ಲಿ.
ನಟಿ ಹಿನಾ ಖಾನ್ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಕಪ್ಪು ಬಿಳಿ ಬಣ್ಣದ ಬಿಕಿನಿ ಧರಿಸಿ ಬಿಕಿನಿ ಧರಿಸಿ ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದಾರೆ. ಅಂಡರ್ ವಾಟರ್ನಲ್ಲಿ ಮಲಗಿ ಮಸ್ತ್ ಪೋಸ್ ನೀಡಿದ್ದಾರೆ.
ಬಿಕಿನಿ ಫೋಟೋ ಶೇರ್ ಮಾಡಿ ಹಿನಾ ಖಾನ್, ನಾನು ಈ ಪೂಲ್ ಅನ್ನು ನನ್ನ ರೂಮ್ ಆಗಿ ಮತ್ತು ಕೆಳಗೆ ನನ್ನ ಬೆಡ್ ಆಗಿ ಮಾಡಿದ್ದೀನಿ' ಎಂದು ಕ್ಯಾಪ್ಷನ್ ನೀಡಿದ್ದಾರೆ.ಹಿನಾ ಫೋಟೋಗಳಿಗೆ ಸರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ನಟಿ ಮೌನಿ ರಾಯ್ ಕೂಡ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದಾರೆ.
ಮತ್ತಷ್ಟು ಫೋಟೋದಲ್ಲಿ ಹಿನಾ ಖಾನ್ ಬಿಳಿ ಬಣ್ಣದ ಮಿನಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಡೆ ಮೇಲೆ ಕುಳಿತು ಸಖತ್ ಪೋಸ್ ನೀಡಿರುವ ಹಿನಾ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ.
ಹಿಂದಿ ಕಿರುತೆರೆಯ ಹಾಟ್ ನಟಿ ಹೀನಾ ಖಾನ್ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 34 ವರ್ಷದ ಈ ನಟಿ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದಾರೆ. ಇಂಡಿಯನ್ ಐಡಲ್, ಬಿಗ್ ಬಾಸ್ ಹಿಂದಿ 11, 14 ಹಾಗೂ ನಾಗಿನ್ ಧಾರಾವಾಹಿಯಲ್ಲಿ ಹಿನಾ ಖಾನ್ ಕಾಣಿಸಿಕೊಂಡಿದ್ದರು. ಸದ್ಯ ವೆಬ್ ಸಿರಿಸ್ ನಲ್ಲಿ ನಟಿಸುತ್ತಿದ್ದಾರೆ.