ಚಿತ್ರಕ್ಕೆ ಅನುಕೂಲವಾಯ್ತೆ ವಿವಾದ ?
ಚೆನ್ನೈ(ಅ.24): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತಾದ ದೃಶ್ಯಾವಳಿಗಳ ಸಂಬಂಧವಾಗಿ ನಟ ವಿಜಯ್ ಅಭಿನಯದ ‘ಮರ್ಸೆಲ್’ ಚಿತ್ರದ ಪರ ಮತ್ತು ವಿರೋಧಗಳ ಚರ್ಚೆಯ ಹೊರತಾಗಿಯೂ, ಈ ಚಿತ್ರ ತೆರೆಗೆ ಅಪ್ಪಳಿಸಿದ 6 ದಿನದಲ್ಲಿ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ರು. ಆದಾಯ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ. 130 ಕೋಟಿ ರು. ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿತ್ತು.
